ಸ್ಕಾಡಾ ಯೋಜನೆ ವಿಚಾರ: ಮಾಜಿ ಸಚಿವ ಎಂ.ಬಿ ಪಾಟೀಲ್​ ವಿರುದ್ಧ ಹರಿಹಾಯ್ದ ಶಾಸಕ ರಾಜುಗೌಡ

| Updated By: ವಿವೇಕ ಬಿರಾದಾರ

Updated on: Feb 14, 2023 | 12:36 PM

ಸ್ಕಾಡಾ 2ನೇ ಹಂತದ ಕಾಮಗಾರಿ ಟೆಂಡರ್ ಯಾವಾಗ ಆಗಿದೆ ಗೊತ್ತಾ? 1,050 ಕೋಟಿ ಹಣ ಮಂಜೂರು ಮಾಡಿಸಿದ್ದೇನೆ. ಈ ಕಾಮಗಾರಿ ನೀವಿದ್ದಾಗ ಆಗಿತ್ತು ಅಂದರೇ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. 2018ರಲ್ಲಿ ನಾನು ಶಾಸಕನಾದ ಮೇಲೆ ಕಾಮಗಾರಿ ಟೆಂಡರ್ ಆಗಿದ್ದರೇ ನೀನು ರಾಜಕೀಯದಿಂದ ನಿವೃತ್ತಿ ಆಗುತ್ತೀಯಾ ಎಂದು ಬಿಜೆಪಿ ಶಾಸಕ ರಾಜುಗೌಡ, ಕಾಂಗ್ರೆಸ್​ ಶಾಸಕ ಎಂ.ಬಿ ಪಾಟೀಲ್​ ಅವರಿಗೆ ಸವಾಲು ಹಾಕಿದ್ದಾರೆ.

ಯಾದಗಿರಿ: ಸ್ಕಾಡಾ 2ನೇ ಹಂತದ ಕಾಮಗಾರಿ ಟೆಂಡರ್ ಯಾವಾಗ ಆಗಿದೆ ಗೊತ್ತಾ? 1,050 ಕೋಟಿ ಹಣ ಮಂಜೂರು ಮಾಡಿಸಿದ್ದೇನೆ. ಈ ಕಾಮಗಾರಿ ನೀವಿದ್ದಾಗ ಆಗಿತ್ತು ಅಂದರೇ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. 2018ರಲ್ಲಿ ನಾನು ಶಾಸಕನಾದ ಮೇಲೆ ಕಾಮಗಾರಿ ಟೆಂಡರ್ ಆಗಿದ್ದರೇ ನೀನು ರಾಜಕೀಯದಿಂದ ನಿವೃತ್ತಿ ಆಗುತ್ತೀಯಾ ಎಂದು ಬಿಜೆಪಿ ಶಾಸಕ ರಾಜುಗೌಡ (BJP MLA Rajugouda), ಕಾಂಗ್ರೆಸ್​ ಶಾಸಕ ಎಂ.ಬಿ ಪಾಟೀಲ್ (Congress MLA MB Patil)​ ಅವರಿಗೆ ಸವಾಲು ಹಾಕಿದ್ದಾರೆ. 2017ರಲ್ಲಿ ಸ್ಕಾಡಾ ಗೇಟ್​ಗಳನ್ನು (ನಾರಾಯಣಪುರ ಎಡದಂಡೆ ಕಾಲುವೆಗೆ ಜಿಐಎಸ್ ಆಧಾರಿತ ಸ್ವಯಂಚಾಲಿತ ಯಾಂತ್ರೀಕೃತ ತಂತ್ರಜ್ಞಾನ SCADA (Supervisory Control and data acquisition) ಯೋಜನೆ.) ನಾವು ಉದ್ಘಾಟಿಸಿದ್ದೇವೆ ಎಂಬ ಮಾಜಿ ಸಚಿವ ಎಂ.ಬಿ.ಪಾಟೀಲ್​ ಹೇಳಿಕೆಗೆ ಹರಿಹಾಯ್ದ ರಾಜಯಗೌಡ ನಿನ್ನ ತರಹ ನಾನು ಪುಕ್ಕಟೆ ಮಾತನಾಡುವುದಿಲ್ಲ. 2017ರಲ್ಲೇ ಕಾಮಗಾರಿ ಆಗಿದ್ದರೇ ರಾಜಕೀಯದಿಂದ ನಿವೃತ್ತಿ ಪಡೆದು, ನಿಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಅಂತ ನಾನೇ ಪ್ರಚಾರ ಮಾಡುತ್ತೇನೆ. ಇಲ್ಲದಿದ್ದರೇ ನಾನು ಹಾಕಿದ ಸವಾಲು ನೀನು ಸ್ವೀಕರಿಸು ಎಂದಿದ್ದಾರೆ.