ಬಿಜೆಪಿ ಶಾಸಕನಿಂದ ಆಟೋ ಚಾಲಕನಿಗೆ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಭಾರೀ ಆಕ್ರೋಶ
ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಪರಾಗ್ ಶಾ ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಘಟನೆಗೆ ವಿರೋಧ ಪಕ್ಷದ ನಾಯಕರು ತೀವ್ರ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಶಾಸಕನನ್ನು ಟೀಕಿಸಿದ್ದಾರೆ. ಶಾಸಕ ಪರಾಗ್ ಶಾ ಒಬ್ಬ ಆಟೋ ಚಾಲಕ ಸಂಚಾರ ನಿಯಮ ಉಲ್ಲಂಘಿಸುತ್ತಿರುವುದನ್ನು ಗಮನಿಸಿದರು. ಇದು ಅವರನ್ನು ಕೆರಳಿಸಿತು.
ಮುಂಬೈ, ಡಿಸೆಂಬರ್ 22: ಮಹಾರಾಷ್ಟ್ರದ ಬಿಜೆಪಿ (BJP) ಶಾಸಕರೊಬ್ಬರು ಆಟೋ ಚಾಲಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘಿಸಿ, ಒನ್ವೇಯಲ್ಲಿ ಬರುತ್ತಿದ್ದ ಆಟೋ ಚಾಲಕನನ್ನು ಹಿಡಿದು ನಿಲ್ಲಿಸಿದ ಶಾಸಕ ಆತನ ಕೆನ್ನೆಗೆ ಹೊಡೆದಿದ್ದಾರೆ. ಈ ವಿಡಿಯೋ ತುಣುಕು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರೊಂದಿಗೆ, ಶಾಸಕರ ವರ್ತನೆಯ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ.
ಮಹಾರಾಷ್ಟ್ರದ ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಉಂಟಾಗಿರುವ ಟ್ರಾಫಿಕ್ ಸಮಸ್ಯೆ ವಿರೋಧಿಸಿ ಬಿಜೆಪಿ ಶಾಸಕ ಪರಾಗ್ ಶಾ ಭಾನುವಾರ ಸ್ಥಳೀಯರೊಂದಿಗೆ ಪ್ರತಿಭಟನೆ ನಡೆಸಿದರು. ಈ ವೇಳೆ ಶಾಸಕ ಪರಾಗ್ ಶಾ ಒಬ್ಬ ಆಟೋ ಚಾಲಕ ಸಂಚಾರ ನಿಯಮ ಉಲ್ಲಂಘಿಸುತ್ತಿರುವುದನ್ನು ಗಮನಿಸಿದರು. ಇದು ಅವರನ್ನು ಕೆರಳಿಸಿತು. ಆತನ ಬಳಿ ಹೋದ ಅವರು ಎಲ್ಲರೂ ನೋಡುತ್ತಿರುವಾಗಲೇ ಆಟೋ ಚಾಲಕನ ಕೆನ್ನೆಗೆ ಬಾರಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Dec 22, 2025 10:37 PM