Karnataka Budget Session: ನೂರ್ಹತ್ತು ಹಳ್ಳಿ ವ್ಯಾಪ್ತಿಗೆ ಕಾವೇರಿ ನೀರು ಪೂರೈಸುವ ಬಗ್ಗೆ ಸರ್ಕಾರದ ಭಿನ್ನ ಹೇಳಿಕೆಗಳನ್ನು ಪ್ರಶ್ನಿಸಿದ ಎಸ್ ಟಿ ಸೋಮಶೇಖರ್
ಜನಸ್ಪಂದನ ಕಾರ್ಯಕ್ರಮಗಳಲ್ಲಿ ಶಿವಕುಮಾರ್ ಅವರು ಮಾರ್ಚ್ ತಿಂಗಳಲ್ಲಿ ಕಾವೇರಿ ನೀರನ್ನು ಕೊಡುತ್ತೇವೆ ಅನ್ನುತ್ತಾರೆ, ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇ ತಿಂಗಳಲ್ಲಿ ನೀರು ಸಿಗಲಿದೆ ಎನ್ನುತ್ತಾರೆ, ಸದನದಲ್ಲಿ ಒದಗಿಸಿರುವ ಉತ್ತರದಲ್ಲಿ ಇನ್ನೂ ಎರಡು ವರ್ಷ ಬೇಕಾಗುತ್ತದೆ ಅಂತ ಹೇಳಲಾಗಿದೆ, ನಾವು ಯಾವುದನ್ನು ನಂಬಬೇಕು ಎಂದು ಸೋಮಶೇಖರ್ ಪ್ರಶ್ನಿಸುತ್ತಾರೆ.
ಬೆಂಗಳೂರು: ಪ್ರಾಯಶಃ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (ST Somashekhar) ಸದನದಲ್ಲಿ ತನ್ನ ಮೇಲೆ ದಾಳಿ ನಡೆಸಬಹುದೆಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಭಾವಿಸಿರಲಿಕ್ಕಿಲ್ಲ. ನೂರ ಹತ್ತು ಹಳ್ಳಿಗೆ ಕುಡಿಯುವ ನೀರು (ಕಾವೇರಿ ನೀರು 5 ನೇ ಹಂತ) (Cauvery Water Stage V) ಪೂರೈಕೆಯ ಬಗ್ಗೆ ಸರ್ಕಾರದ ದ್ವಂದ್ವ ಹೇಳಿಕೆಗಳನ್ನು ಶಾಸಕ ಪ್ರಶ್ನಿಸಿದರು. ಸೋಮಶೇಖರ್ ಕೇಳಿದ ಪ್ರಶ್ನೆಯೊಂದಕ್ಕೆ ಶಿವಕುಮಾರ್ ನೀಡಿದ ಲಿಖಿತ ಉತ್ತರದ ಪ್ರತಿಯನ್ನು ಕೈಯಲ್ಲಿ ಹಿಡಿದು ಮಾತಾಡಿದ ಶಾಸಕ ನೂರ ಹತ್ತು ಹಳ್ಳಿ ವ್ಯಾಪ್ತಿ ಯಾವಾಗ ಆರಂಭವಾಯಿತು, ಯಾವಾಗ ಕೊನೆಗೊಳ್ಳುತ್ತದೆ ಅನ್ನೋದರ ಬಗ್ಗೆ ಉಪ ಮುಖ್ಯಮಂತ್ರಿಯವರಿಗೆ ಸರಿಯಾದ ಮಾಹಿತಿ ಇದ್ದಂತಿಲ್ಲ, ಅಧಿಕಾರಿಗಳು ನೀಡಿದ ಮಾಹಿತಿಯನ್ನು ಅವರು ವೆರಿಫೈ ಮಾಡಿ ಉತ್ತರ ನೀಡಿದ್ದರೆ ತನಗೆ ಸಮಾಧಾನವಾಗುತಿತ್ತು ಎಂದು ಹೇಳಿದರು.
ಈ ಯೋಜನೆ ಮಾರ್ಚ್ ತಿಂಗಳಲ್ಲಿ ಮುಗಿಯಬೇಕಿತ್ತು, ಅದರೆ ಶಿವಕುಮಾರ್ ನೀಡಿರುವ ಉತ್ತರದಲ್ಲಿ ಇನ್ನೂ ಎರಡು ವರ್ಷ ಬೇಕಾಗುತ್ತದೆ ಅಂತ ತಿಳಿಸಲಾಗಿದೆ. ಜನಸ್ಪಂದನ ಕಾರ್ಯಕ್ರಮಗಳಲ್ಲಿ ಶಿವಕುಮಾರ್ ಅವರು ಮಾರ್ಚ್ ತಿಂಗಳಲ್ಲಿ ಕಾವೇರಿ ನೀರನ್ನು ಕೊಡುತ್ತೇವೆ ಅನ್ನುತ್ತಾರೆ, ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇ ತಿಂಗಳಲ್ಲಿ ನೀರು ಸಿಗಲಿದೆ ಎನ್ನುತ್ತಾರೆ, ಸದನದಲ್ಲಿ ಒದಗಿಸಿರುವ ಉತ್ತರದಲ್ಲಿ ಇನ್ನೂ ಎರಡು ವರ್ಷ ಬೇಕಾಗುತ್ತದೆ ಅಂತ ಹೇಳಲಾಗಿದೆ, ನಾವು ಯಾವುದನ್ನು ನಂಬಬೇಕು ಎಂದು ಸೋಮಶೇಖರ್ ಪ್ರಶ್ನಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ