Assembly Session: ಟಿ20ಐ ವಿಶ್ವಕಪ್ ಗೆದ್ದಿರುವ ರಾಹುಲ್ ದ್ರಾವಿಡ್ ರನ್ನು ಅಭಿನಂದಿಸಲು ನಿರ್ಣಯ ಮಂಡನೆ ಕೋರಿದ ಸುರೇಶ್ ಕುಮಾರ್

|

Updated on: Jul 15, 2024 | 4:10 PM

Assembly Session: ವಿಧನಸಭಾ ಸ್ಪೀಕರ್ ಯುಟಿ ಖಾದರ್ ಅವರು ಸುರೇಶ್ ಕುಮಾರ್ ಅವರು ನೀಡಿದ ಸಲಹೆಗೆ ಮನ್ನಣೆ ನೀಡಿ ನಿರ್ಣಯವನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ, ಸಂತಾಪ ಸೂಚಕ ನಿರ್ಣಯದ ನಂತರ ಅದನ್ನು ಮಂಡಿಸಲಾಗುವುದು, ನಿಮ್ಮ ಸಲಹೆ ಬಹಳ ಉತ್ತಮವಾದದ್ದ್ದು ಎನ್ನುತ್ತಾರೆ.

ಬೆಂಗಳೂರು: ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸದಭಿರುಚಿ ವ್ಯಕ್ತಿತ್ವದ ನಾಯಕ. ಒಬ್ಬ ವಿಭಿನ್ನ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಹಿರಿಮೆ ಅವರದ್ದು. ಮುಂಗಾರು ವಿಧಾನ ಸಭಾ ಅಧಿವೇಶನದ ಮೊದಲ ದಿನ ಅವರು ಅಗಲಿದ ಗಣ್ಯರಿಗೆ ಸಂತಾಪ ಸೂಚಕ ನಿರ್ಣಯದ ಮೇಲೆ ಸದಸ್ಯರು ಮಾತಾಡುತ್ತಿದ್ದಾಗ ಸಭಾಧ್ಯಕ್ಷರಿಗೆ ಒಂದು ಮನವಿ ಮಾಡಲು ಎದ್ದುನಿಂತರು. ಇತ್ತೀಚಿಗೆ ಭಾರತ ಐಸಿಸಿ ಟಿ20ಐ ವಿಶ್ವಕಪ್ ಗೆದ್ದಿದೆ. ಭಾರತದ ವರ್ಣಿಸಲದಳ ಸಾಧನೆಯಲ್ಲಿ ಕನ್ನಡಿಗ ಕೋಚ್ ರಾಹುಲ್ ದ್ರಾವಿಡ್ ಅವರ ಕೊಡುಗೆ ಬಹಳ ದೊಡ್ಡದು ಮತ್ತು ಮಹತ್ತರವಾದದ್ದು. ಟೀಮ್ ಇಂಡಿಯ ಸದಸ್ಯರು ಮತ್ತು ದ್ರಾವಿಡ್ ಇಡೀ ವಿಶ್ವದಲ್ಲಿ ಭಾರತಕ್ಕೆ ಹೆಗ್ಗಳಿಕೆಯನ್ನು ತಂದುಕೊಟ್ಟಿದ್ದಾರೆ. ಹಾಗಾಗಿ ಸದನದ ಪರವಾಗಿ ದ್ರಾವಿಡ್ ಮತ್ತು ಟೀಮ್ ಇಂಡಿಯಾದ ಸದಸ್ಯರನ್ನು ಅಭಿನಂದಿಸಲು ಒಂದು ನಿರ್ಣಯವನ್ನು ಮಂಡಿಸಬೇಕು ಅಂತ ಹೇಳಿದಾಗ ಇಡೀ ಸದನ ಚಪ್ಪಾಳೆ ತಟ್ಟಿ ಅವರ ಸಲಹೆಯನ್ನು ಸ್ವಾಗತಿಸಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ‘ರಾಹುಲ್ ದ್ರಾವಿಡ್​ಗೆ ಭಾರತ ರತ್ನ ನೀಡಿ’; ಮಾಜಿ ಟೀಂ ಇಂಡಿಯಾ ನಾಯಕನ ಒತ್ತಾಯ

Follow us on