ಬೆಳಗಾವಿ ಅಧಿವೇಶನ: ಜಮೀರ್ ಅಹ್ಮದ್ ರನ್ನು ವಜಾ ಮಾಡುವಂತೆ ಬಿಜೆಪಿ ಶಾಸಕರಿಂದ ಸದನ ಬಾವಿಗಿಳಿದು ಪ್ರತಿಭಟನೆ

ಬೆಳಗಾವಿ ಅಧಿವೇಶನ: ಜಮೀರ್ ಅಹ್ಮದ್ ರನ್ನು ವಜಾ ಮಾಡುವಂತೆ ಬಿಜೆಪಿ ಶಾಸಕರಿಂದ ಸದನ ಬಾವಿಗಿಳಿದು ಪ್ರತಿಭಟನೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 11, 2023 | 2:29 PM

Karnataka Assembly Session: ತಮ್ಮ ಹೇಳಿಕೆಗೆ ಸಚಿವ ಖಾದರ್ ಸಮಜಾಯಿಷಿ ನೀಡಿರುವುದರಿಂದ ಕಾರ್ಯಕಲಾಪ ಮುಂದುವರಿಸಬಹುದು ಎಂದು ಹೇಳುವ ಸ್ಪೀಕರ್ ಉತ್ತರ ಕರ್ನಾಟಕದ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಡವೇ ಎಂದು ಕೇಳಿದಾಗ, ಬಿಜೆಪಿ ಶಾಸಕರು ಒಕ್ಕೊರಲಿನಿಂದ ಜಮೀರ್ ವಜಾಕ್ಕೆ ಆಗ್ರಹಿಸುತ್ತಾರೆ. ಏತನ್ಮಧ್ಯೆ ಜಮೀರ್ ಏನನ್ನೋ ಹೇಳಲು ಎದ್ದು ನಿಂತಾಗ ಗಲಾಟೆ ಮತ್ತಷ್ಟು ಹೆಚ್ಚುತ್ತದೆ.

ಬೆಳಗಾವಿ: ಸ್ಪೀಕರ್ ಸ್ಥಾನದ ಬಗ್ಗೆ ಅನುಚಿತವಾಗಿ ಮಾತಾಡಿದ ಸಚಿವ ಬಿಜೆಡ್ ಜಮೀರ್ ಅಹ್ಮದ್ ರನ್ನು (BZ Zameer Ahmed Khan) ವಜಾ ಮಾಡಬೇಕೆಂದು ಒತ್ತಾಯಿಸಿ ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ನೇತೃತ್ವದಲ್ಲಿ ಪ್ರತಿಪಕ್ಷಗ ಶಾಸಕರು ಪ್ರತಿಭಟನೆ ನಡೆಸುತ್ತಾ ಸದನದ ಬಾವಿಗಿಳಿದರು (enter well of the House). ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ಕೂಗಾಟ ಮತ್ತು ಅರಚಾಟದಲ್ಲಿ ಯಾರು ಏನು ಹೇಳುತ್ತಿದ್ದಾರೆ ಅಂತ ಗೊತ್ತಾಗುವುದಿಲ್ಲ. ನಾವು ಯಾವ ದೇಶದಲ್ಲಿದ್ದೇವೆ, ಇದೇನು ಪಾಕಿಸ್ತಾನವೇ, ಬಿಜೆಪಿ ಶಾಸಕರು ಕೀಳು ಎಂಬಂತೆ ಮಾತಾಡಿರುವ ಜಮೀರ್ ಅಹ್ಮದ್ ಅವರನ್ನು  ಸಭಾಧ್ಯಕ್ಷರು ಕೂಡಲೇ ವಜಾ ಮಾಡಬೇಕು, ಅಲ್ಲಿಯವರೆಗೆ ಸದನದ ಕಲಾಪ ನಡೆಯಲು ಬಿಡೋದಿಲ್ಲ ಎಂದು ಅಶೋಕ ಹೇಳುವುದು ಅಸ್ಪಷ್ಟವಾಗಿ ಕೇಳಿಸುತ್ತದೆ. ಜಮೀರ್ ಗೆ ನೋಟೀಸ್ ನೀಡಿ ಕಲಾಪ ಮುಂದುವರಿಸಿ ಕಾಂಗ್ರೆಸ್ ಶಾಸಕರು ಹೇಳುತ್ತಾರೆ. ಬಿಜೆಪಿ ನಾಯಕರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದ ಸಭಾಧ್ಯಕ್ಷ ಯುಟಿ ಖಾದರ್ ಪ್ರಶ್ನೋತ್ತರ ವೇಳೆ ಅರಂಭಿಸುತ್ತಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ