AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ: ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆ

ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ: ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆ

ಸಾಧು ಶ್ರೀನಾಥ್​
|

Updated on:Dec 11, 2023 | 2:44 PM

Share

ಜಯನಗರದ 5ನೇ ಹಂತದ ನಿವಾಸಿ ಮಂಜು ಎಂಬುವರು ಮನೆ ಮುಂದೆ ಸ್ಕೂಟರ್ ನಿಲ್ಲಿಸಿದ್ರು. ಆದರೆ ಸ್ಕೂಟರ್ ಗೆ ಲಾಕ್ ಮಾಡಿರಲಿಲ್ಲ. ಲಡ್ಡು ಬಂದ್ ಬಾಯಿಗೆ ಬಿದ್ದಂತೆ ಕಳ್ಳನಿಗೆ ಅದುವೇ ವರವಾಯಿತು. ಮೊದಲು ಕಪ್ಪು ಬಣ್ಣದ ಸ್ಕೂಟರ್‌ನ ಮಿರರ್‌ನಲ್ಲಿ ಮುಖ ನೋಡಿಕೊಳ್ಳುವ ನಾಟಕ ಆಡುತ್ತಾ ಕದ್ದಿದ್ದಾನೆ.

ಟೂ ವ್ಹೀಲರ್‌ ಮಾಲೀಕರೇ ಎಚ್ಚರ. ನೀವು ಗಾಡಿ ನಿಲ್ಲಿಸುವಾಗ ಲಾಕ್‌ ಆಗಿದ್ಯಾ ಅಂತ ಒಮ್ಮೆ ನೋಡಿ ಕೊಳ್ಳಿ. ಇಲ್ಲವಾದರೆ ನಿಮ್ಮ ಗಾಡಿ ಅಬೇಸ್‌ ಆಗೋ ಚಾನ್ಸ್ ಇದೆ. ಏಕೆಂದ್ರೆ, ಬೆಂಗಳೂರಿನ ಜಯನಗರ ನಿವಾಸಿಯೊಬ್ಬರು ಲಾಕ್‌ ಮಾಡದ ಗಾಡಿಯನ್ನು ಕಳ್ಳನೊಬ್ಬ ಕಳವು ಮಾಡಿ ಪರಾರಿಯಾಗಿದ್ದಾನೆ. ಬೆಂಗಳೂರಿನಲ್ಲಿ ಬೈಕ್ ಕಳ್ಳರ ಹಾವಳಿ ಜಾಸ್ತಿ ಆಗ್ಬಿಟ್ಟಿದೆ. ರಾತ್ರಿ ವೇಳೆ ಕಳವು ಮಾಡ್ತಿದ್ದ ಕಳ್ಳರು ಈಗ ಬೆಳಗಿನ ಹೊತ್ತಿನಲ್ಲಿಯೇ ದ್ವಿಚಕ್ರವಾಹನವನ್ನು ಹೊತ್ತು ಹೋಗುತ್ತಿದ್ದಾರೆ. ಜಯನಗರದಲ್ಲಿ ಮನೆ ಮುಂದೆ ನಿಂತಿದ್ದ ಸ್ಕೂಟರ್‌ ಅನ್ನು ಕಳ್ಳ ಕಳವು ಮಾಡಿದ್ದಾನೆ. ಸ್ಕೂಟರ್‌ ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜಯನಗರದ 5ನೇ ಹಂತದ ನಿವಾಸಿ ಮಂಜು ಎಂಬುವರು ಮನೆ ಮುಂದೆ ಸ್ಕೂಟರ್ ನಿಲ್ಲಿಸಿದ್ರು. ಆದರೆ ಸ್ಕೂಟರ್ ಗೆ ಲಾಕ್ ಮಾಡಿರಲಿಲ್ಲ. ಲಡ್ಡು ಬಂದ್ ಬಾಯಿಗೆ ಬಿದ್ದಂತೆ ಕಳ್ಳನಿಗೆ ಅದುವೇ ವರವಾಯಿತು. ಮೊದಲು ಕಪ್ಪು ಬಣ್ಣದ ಸ್ಕೂಟರ್‌ನ ಮಿರರ್‌ನಲ್ಲಿ ಮುಖ ನೋಡಿಕೊಳ್ಳುವ ನಾಟಕ ಆಡುತ್ತಾನೆ. ಬಳಿಕ ಅತ್ತಿಂತಿದ್ದ ನೋಡುತ್ತಾ ಬಿಳಿ ಸ್ಕೂಟರ್ ಹತ್ತಿರ ಬರ್ತಾನೆ. ಕೆಲ ಹೊತ್ತು ಗಾಡಿ ಮೇಲೆ ಕುಳಿತುಕೊಳ್ಳುವ ಕಳ್ಳ ಯಾರಾದ್ರೂ ನೋಡ್ತಾರಾ ಅಂತ ನೋಡಿದ್ದಾನೆ. ಬಳಿಕ ಸ್ಕೂಟರ್‌ ಅನ್ನು ತಳ್ಳಿಕೊಂಡು ಪರಾರಿಯಾಗಿದ್ದಾನೆ. ಈಗ ಕಳೆದು ಹೋಗಿರೋ ಸ್ಕೂಟರ್ ಹುಡುಕಿಕೊಡಿ ಎಂದು ಮಾಲೀಕ ಜಯನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Dec 11, 2023 02:41 PM