ಗುರುಮಠಕಲ್ ಮತಕ್ಷೇತ್ರದಿಂದ ನಾನೇ ಬಿಜೆಪಿ ಅಭ್ಯರ್ಥಿ, ಗೆಲ್ಲೋದು ನಾನೇ, ಮಂತ್ರಿಯಾಗುವುದು ಕೂಡ ನಿಶ್ಚಿತ: ಬಾಬುರಾವ್ ಚಿಂಚನಸೂರ್

ಗುರುಮಠಕಲ್ ಮತಕ್ಷೇತ್ರದಿಂದ ನಾನೇ ಬಿಜೆಪಿ ಅಭ್ಯರ್ಥಿ, ಗೆಲ್ಲೋದು ನಾನೇ, ಮಂತ್ರಿಯಾಗುವುದು ಕೂಡ ನಿಶ್ಚಿತ: ಬಾಬುರಾವ್ ಚಿಂಚನಸೂರ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 13, 2022 | 6:32 PM

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹವಾ ಮುಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವರ್ಚಸ್ಸು ಏನೂ ನಡೆಯದು, ರಾಜ್ಯ ಕಾಂಗ್ರೆಸ್ 4 ಭಾಗಗಳಲ್ಲಿ ಹಂಚಿ ಹೋಗಿದೆ ಎಂದು ಚಿಂಚನಸೂರ್ ಕುಹಕವಾಡಿದರು.

ಯಾದಗಿರಿ: ಬಿಜೆಪಿ ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ (Baburao Chinchansur) ಅವರು ಮಂಗಳವಾರ ಯಾದಗಿರಿಯಲ್ಲಿ ಪತ್ರಕರ್ತರೊಂದಿಗೆ ಮಾತಾಡುವುವಾಗ 2023 ರ ವಿಧಾನ ಸಭೆ ಚುನಾವಣೆಯಲ್ಲಿ ಗುರುಮಠಕಲ್ (Gurmitkal) ಮತಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುವುದು ತಾವೇ, ಗೆಲ್ಲೋದು ನಿಶ್ಚಿತ ಮತ್ತು ಮಂತ್ರಿ ಆಗೋದು ಸಹ ಖಂಡಿತ ಎಂದು ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಹವಾ ಮುಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ವರ್ಚಸ್ಸು ಏನೂ ನಡೆಯದು, ರಾಜ್ಯ ಕಾಂಗ್ರೆಸ್ 4 ಭಾಗಗಳಲ್ಲಿ ಹಂಚಿ ಹೋಗಿದೆ ಎಂದು ಚಿಂಚನಸೂರ್ ಕುಹಕವಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ