ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದ ಯುವಕ ಹೋರಿ ತಿವಿತಕ್ಕೊಳಗಾಗಿ ಸ್ಥಳದಲ್ಲೇ ಸಾವು!
ಆವೇಶಕ್ಕೊಳಗಾದಂತೆ ರಭಸದಿಂದ ಓಡಿಬಂದ ಹೋರಿ ಮಂಜುನಾಥರನ್ನು ಜೋರಾಗಿ ತಿವಿದಿದ್ದರಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆ (Bull Taming Contest) ಅಪಾಯಕಾರಿ ಅಂತ ಗೊತ್ತಿದ್ದರೂ ಜನ ಮುಗಿಬಿದ್ದು ಅದನ್ನು ನೋಡುತ್ತಾರೆ. ಸ್ಪರ್ಧೆ ನೋಡಲಿ ಹೋದ ಯುವಕನೊಬ್ಬ ಪ್ರಾಣವನ್ನೇ ಕಳೆದುಕೊಂಡ ದಾರುಣ ಘಟನೆ ಹಾವೇರಿ (Haveri) ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ನಡೆದಿದೆ. ಯುವಕನನ್ನು ಅದೇ ಗ್ರಾಮದ ಮಂಜುನಾಥ ಮೈಲಾರಪ್ಪ ಚಳ್ಳಕ್ಕನವರ್ (Manjunath Mylarappa Challakkanavar) (27) ಎಂದು ಗುರುತಿಸಲಾಗಿದೆ. ಆವೇಶಕ್ಕೊಳಗಾದಂತೆ ರಭಸದಿಂದ ಓಡಿಬಂದ ಹೋರಿ ಮಂಜುನಾಥರನ್ನು ಜೋರಾಗಿ ತಿವಿದಿದ್ದರಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos