ಬಾಗಲಕೋಟೆ: ಜನ್ಮಕೊಟ್ಟ ಅಪ್ಪನನನ್ನು ಕೊಂದು ದೇಹವನ್ನು 30 ಭಾಗಗಳಲ್ಲಿ ತುಂಡರಿಸಿ ತಮ್ಮ ಹೊಲದಲ್ಲಿ ಹೂತುಹಾಕಿದ ಮಗ!
ವಿಟ್ಠಲ ಕುಳಲಿ ಹೆಸರಿನ ಯುವಕ ತನಗೆ ಜನ್ಮ ನೀಡಿದ ತಂದೆ ಪರಶುರಾಮ್ ಕುಳಲಿಯನ್ನು ಕೊಂದು ದೇಹವನ್ನು 30 ತುಂಡುಗಳಲ್ಲಿ ಕತ್ತರಿಸಿ ಅವರಿಗೆ ಸೇರಿದ ಹೊಲದಲ್ಲೇ ಅವುಗಳನ್ನು ಹೂತು ಹಾಕಿದ್ದಾನೆ.
ಬಾಗಲಕೋಟೆ: ಇತ್ತೀಚಿನ ದಿನಗಳಲ್ಲಿ ಗಂಡ ಹೆಂಡತಿಯನ್ನು ಕೊಲ್ಲುವುದು ಹೆಂಡತಿ ಗಂಡನನ್ನು ಕೊಲ್ಲಿಸುವುದು, ಮಗ ತಂದೆಯನ್ನು, ತಂದೆ ಮಗನನ್ನು, ಒಡಹುಟ್ಟಿದವರು ಆಸ್ತಿಗಾಗಿ ಪರಸ್ಪರ ಕಚ್ಚಾಡಿ ಕೊಲೆಯಾಗುವುದು-ಸಾಮಾನ್ಯ ಅನಿಸುವಷ್ಟು ಸಾಮಾನ್ಯವಾಗಿ ಬಿಟ್ಟಿದೆ. ಬಾಗಲಕೋಟೆ ಜಿಲ್ಲೆ ಮುಧೋಳ (Mudhol) ಪಟ್ಟಣದ ಹೊರವಲಯದಲ್ಲಿರುವ ಮಂಟೂರ್ ಬೈಪಾಸ್ (Mantoor bypass) ಬಳಿ ವಿಟ್ಠಲ ಕುಳಲಿ (Vithal Kulali) ಹೆಸರಿನ ಯುವಕ ತನಗೆ ಜನ್ಮ ನೀಡಿದ ತಂದೆಯನ್ನೇ (ಪರಶುರಾಮ್ ಕುಳಲಿ) ಕೊಂದು ದೇಹವನ್ನು 30 ತುಂಡುಗಳಲ್ಲಿ ಕತ್ತರಿಸಿ ಅವರಿಗೆ ಸೇರಿದ ಹೊಲದಲ್ಲೇ ಅವುಗಳನ್ನು ಹೂತು ಹಾಕಿದ್ದಾನೆ. ಪ್ರತಿದಿನ ಕುಡಿದು ಬಂದು ಹಿಂಸಿಸುತ್ತಿದ್ದ ಕಾರಣಕ್ಕೆ ಬೇಸತ್ತು ಮಗ ತನ್ನಪ್ಪನ ಹತ್ಯೆಗೈದಿದ್ದಾನಂತೆ!
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos