ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ ಸಲಹೆಯೊಂದನ್ನು ಪ್ರಸ್ತಾಪಿಸಿದ್ದಾರೆ
ಎರಡೂ ಪಕ್ಷಗಳ ನಾಯಕರನ್ನು ಕರೆಸಿ ಮಾತಾಡಬೇಕು, ಗಲಾಟೆಗಳನ್ನು ಸೃಷ್ಟಿಸದಂತೆ ಅವರಿಗೆ ಹೇಳಬೇಕು ಎಂದು ವಿಶ್ವನಾಥ ಹೇಳಿದ್ದಾರೆ.
ಮೈಸೂರು: ಮೊಟ್ಟೆ ಪ್ರಕರಣ, ಸಾವರ್ಕರ್ ಫೋಟೋ ವಿವಾದ ಮೊದಲಾದವುಗಳಿಂದ ರಾಜ್ಯದ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ ಎಂದು ಹೇಳಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ (H Vishwanath) ಅವರು ಅದಕ್ಕೊಂದು ಪರಿಹಾರವನ್ನೂ ಸೂಚಿಸುತ್ತಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ (BS Yediyurappa), ಎಸ್ ಎಮ್ ಕೃಷ್ಣ (SM Krishna) ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ-ಈ ಮೂವರು ಜೊತೆ ಸೇರಿ ಎರಡೂ ಪಕ್ಷಗಳ ನಾಯಕರನ್ನು ಕರೆಸಿ ಮಾತಾಡಬೇಕು, ಗಲಾಟೆಗಳನ್ನು ಸೃಷ್ಟಿಸದಂತೆ ಅವರಿಗೆ ಹೇಳಬೇಕು ಎಂದು ವಿಶ್ವನಾಥ ಹೇಳಿದ್ದಾರೆ.