ಮಹಿಳಾ ಅಧಿಕಾರಿಗಳ ವಿರುದ್ಧ ಅಸಂವಿಧಾನಿಕ ಪದ ಬಳಸುವುದನ್ನು ಮುಂದುವರಿಸಿದ ಬಿಜೆಪಿ ಎಮ್ಮೆಲ್ಸಿ ರವಿಕುಮಾರ್

Updated on: Jul 03, 2025 | 5:16 PM

ರವಿ ಕುಮಾರ್ ವಿರುದ್ಧ ಯಾವುದೇ ಕ್ರಮ ಒಬ್ಬ ಸಭಾಪತಿಯಾಗಿ ತೆಗೆದುಕೊಳ್ಳಲು ಬರಲ್ಲ, ಅವರನ್ನು ಅಮಾನತು ಮಾಡುವ, ನೋಟೀಸ್ ಕೊಡುವ ಅಧಿಕಾರ ತನಗಿಲ್ಲ, ಆದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ದೂರು ಕೊಟ್ಟಿರುವುದರಿಂದ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ, ಹಾಗಾಗೇ ರವಿಕುಮಾರ್​ಗೆ ಪತ್ರ ಬರೆದು ಸ್ಪಷ್ಟನೆ ಕೇಳುತ್ತೇನೆ ಎಂದು ಸಭಾಪತಿ ಹೊರಟ್ಟಿ ಹೇಳಿದರು.

ಬೆಂಗಳೂರು, ಜುಲೈ: ವಿಧಾನ ಪರಿಷತ್ ಸದಸ್ಯ ಎನ್ ರವಿ ಕುಮಾರ್ಹಿಳಾ ಅಧಿಕಾರಿಗಳ ವಿರುದ್ಧ ಅಸಂವಿಧಾನಿಕ ಪದಗಳನ್ನು ಬಳಸಿ ಮಾತಾಡುವುದನ್ನು ಹವ್ಯಾಸ ಮಾಡಿಕೊಂಡಂತಿದೆ. ಕಲಬುರಗಿಯ ಜಿಲ್ಲಾಧಿಕಾರಿಯನ್ನು ಪಾಕಿಸ್ತಾನಿ ಅಂತ ಕರೆದನಂತರ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿರುವರೆಂದು ಕಾಂಗ್ರೆಸ್ ಆರೋಪ ಮಾಡಿದೆ ಮತ್ತು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ದೂರನ್ನು ಸಲ್ಲಿಸಿದೆ. ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಹೊರಟ್ಟಿಯವರು, ಕೆಪಿಸಿಸಿ ದೂರು ಸಲ್ಲಿಸಿದೆ, ರವಿಕುಮಾರ್ ಅವರಿಂದ ಸ್ಪಷ್ಟನೆ ಕೇಳುತ್ತೇನೆ, ಅವರಿಂದ ಉತ್ತರ ಪಡೆದ ಬಳಿಕ ಮುಂದಿನ ಕ್ರಮದ ಬಗ್ಗೆ ಯೋಚಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:   ಚೀಫ್ ವಿಪ್ ಆಗಿರುವ ರವಿಕುಮಾರ್ ಕಲಬುರಗಿ ಡಿಸಿಯನ್ನು ಪಾಕಿಸ್ತಾನದವರು ಅನ್ನುತ್ತಾರೆ: ಸಿದ್ದರಾಮಯ್ಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ