ಸಿಎಂ ಸಿದ್ದರಾಮಯ್ಯ ‘ಅಮಾವಾಸ್ಯೆ’ ಹೇಳಿಕೆಗೆ ತಮ್ಮದೇ ಸ್ಟೈಲ್ನಲ್ಲಿ ತಿವಿದ ತೇಜಸ್ವಿ ಸೂರ್ಯ
ರಾಜ್ಯದ ಬಿಜೆಪಿ ಸಂಸದರನ್ನ ಟೀಕಿಸುವ ವೇಳೆ ತಮ್ಮನ್ನು 'ಅಮಾವಾಸ್ಯೆ' ಎಂದು ಕರೆದಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಸಂಸದ ತೇಜಸ್ವಿಸೂರ್ಯ ತಿರುಗೇಟು ನೀಡಿದ್ದಾರೆ. ಚಂದ್ರನ ನೋಡಿ ಪೂಜೆ ಮಾಡುವ ಜನರ ಜೊತೆ ಇದ್ದು ಇದ್ದು ನೀವು ಗೊಂದಲಕ್ಕೆ ಒಳಗಾಗಿದ್ದೀರಿ. ಈ ಬಗ್ಗೆ ತಿಳಿದುಕೊಂಡು ಮುಂದೆ ಹೇಳಿಕೆ ಕೊಡಿ. ನಿಮ್ಮ ಬಗ್ಗೆಯೂ ನಾನು ವೈಯಕ್ತಿಕವಾಗಿ ಸಾಕಷ್ಟು ಟೀಕೆ ಮಾಡಬಹುದು. ಆದರೆ ಸಂಸದನಾಗಿ ನನಗೆ ಅದು ಶೋಭೆ ತರಲ್ಲ ಎಂದು ಕೌಂಟರ್ ಕೊಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 23: ತಮ್ಮ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ನೀಡಿದ್ದ ‘ಅಮಾವಾಸ್ಯೆ’ ಹೇಳಿಕೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬಹುಶಃ ಅಮಾವಾಸ್ಯೆ ಮತ್ತು ಹುಣ್ಣಿಮೆಯ ವ್ಯತ್ಯಾಸ ಗೊತ್ತಿಲ್ಲ. ಈ ದಿನಗಳಲ್ಲೂ ಸೂರ್ಯ ಇರುತ್ತಾನೆ, 365 ದಿನಗಳೂ ಪ್ರಕಾಶಿಸುತ್ತಾನೆ. ಚಂದ್ರನ ನೋಡಿ ಪೂಜೆ ಮಾಡುವ ಜನರ ಜೊತೆ ಇದ್ದು ಇದ್ದು ನೀವು ಗೊಂದಲಕ್ಕೆ ಒಳಗಾಗಿದ್ದೀರಿ. ಈ ಬಗ್ಗೆ ತಿಳಿದುಕೊಂಡು ಮುಂದೆ ಹೇಳಿಕೆ ಕೊಡಿ. ನಿಮ್ಮ ಬಗ್ಗೆಯೂ ನಾನು ವೈಯಕ್ತಿಕವಾಗಿ ಸಾಕಷ್ಟು ಟೀಕೆ ಮಾಡಬಹುದು. ಆದರೆ ಸಂಸದನಾಗಿ ನನಗೆ ಅದು ಶೋಭೆ ತರಲ್ಲ. ನನ್ನ ತಂದೆ ವಯಸ್ಸಿನ ನಿಮ್ಮ ಬಗ್ಗೆ ಮಾತಾಡುವ ಸಂಸ್ಕಾರ ನನ್ನದಲ್ಲ ಎಂದು ತಿವಿದಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 23, 2025 01:11 PM
Latest Videos

