ಮಂಡ್ಯದಲ್ಲಿ ಒಂದೂವರೆ ವರ್ಷಗಳ ಹಿಂದೆ ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತರ ಬಂಧನ

|

Updated on: Mar 05, 2024 | 11:56 AM

ಪಾಕಿಸ್ತಾನದ ಸಚಿವನೊಬ್ಬನ ವಿರುದ್ಧ ಘೋಷಣೆ ಕೂಗುವಾಗ ಪಾಕಿಸ್ತಾನ್ ಜಿಂದಾಬಾದ್ ಅಂತ ಹೇಳಿದ್ದು ಯಾಕೆ ಅನ್ನುವ ಪ್ರಶ್ನೆ ಉದ್ಭವಿಸುತ್ತದೆ. ಕಾರ್ಯಕರ್ತ ಹಾಗೆ ಕೂಗಿದಾಕ್ಷಣ ಅವರ ಹಿಂದೆ ನಿಂತಿದ್ದ ಕಾರ್ಯಕರ್ತನೊಬ್ಬ ಅವರ ಬಾಯಿ ಮುಚ್ಚುವುದನ್ನು ವಿಡಿಯೋದಲ್ಲಿ ನೋಡಬಹುದು. ಮತ್ತೊಂದು ಗಹನವಾದ ಸಂಗತಿ; ಈ ಘಟನೆ ನಡೆದಿದ್ದು ಡಿಸೆಂಬರ್ 2022ರಲ್ಲಿ, ಆಗ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು. ಆಗ ಯಾಕೆ ಯಾರೂ ದೂರು ದಾಖಲಿಸಲಿಲ್ಲ?

ಮಂಡ್ಯ: ಸುಮಾರು ಒಂದೂವರೆ ವರ್ಷ ಹಿಂದೆ ನಗರದ ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಸುವಾಗ ಪಾಕಿಸ್ತಾನ್ ಪರ ಘೋಷಣೆ (pro Pakistan slogan ) ಕೂಗಿದ್ದ ಬಿಜೆಪಿ ಕಾರ್ಯಕರ್ತರನ್ನು ಪಶ್ಚಿಮ ಪೊಲೀಸ್ ಠಾಣೆಯ (West police station) ಪೊಲೀಸರು ಬಂಧಿಸಿ ಎಫ್ಐಆರ್ ದಾಖಲಿಸಿದ್ದು ಅವರನ್ನು ಕೋರ್ಟ್ ಎದುರು ಹಾಜರುಪಡಿಸಲಿದ್ದಾರೆ. ಕನ್ನಂಬಾಡಿ ಕುಮಾರ್ (Kannambadi Kumar) ಹೆಸರಿನ ವಕೀಲರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೋವೊಂದರ ಆಧಾರದ ಮೇಲೆ ದೂರು ದಾಖಲಿಸಿದ್ದಾರೆ. ಬಂಧಿತರನ್ನು ಢಣಾಯಕಪುರದ ರವಿ ಮತ್ತು ಆರಾಧ್ಯ ಎಂದು ಗುರುತಿಸಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನದ ಅಂದಿನ ವಿದೇಶಾಂಗ ಸಚಿವನ ವಿರುದ್ಧ ಘೋಷನೆ ಕೂಗಿದ್ದರು. ಅದು ಸರಿ, ಪಾಕಿಸ್ತಾನದ ಸಚಿವನೊಬ್ಬನ ವಿರುದ್ಧ ಘೋಷಣೆ ಕೂಗುವಾಗ ಪಾಕಿಸ್ತಾನ್ ಜಿಂದಾಬಾದ್ ಅಂತ ಹೇಳಿದ್ದು ಯಾಕೆ ಅನ್ನುವ ಪ್ರಶ್ನೆ ಉದ್ಭವಿಸುತ್ತದೆ. ಕಾರ್ಯಕರ್ತ ಹಾಗೆ ಕೂಗಿದಾಕ್ಷಣ ಅವರ ಹಿಂದೆ ನಿಂತಿದ್ದ ಕಾರ್ಯಕರ್ತನೊಬ್ಬ ಅವರ ಬಾಯಿ ಮುಚ್ಚುವುದನ್ನು ವಿಡಿಯೋದಲ್ಲಿ ನೋಡಬಹುದು. ಮತ್ತೊಂದು ಗಹನವಾದ ಸಂಗತಿ; ಈ ಘಟನೆ ನಡೆದಿದ್ದು ಡಿಸೆಂಬರ್ 2022ರಲ್ಲಿ, ಆಗ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು. ಆಗ ಯಾಕೆ ಯಾರೂ ದೂರು ದಾಖಲಿಸಲಿಲ್ಲ? ಕನ್ನಂಬಾಡಿ ಕುಮಾರ್ ಗೆ ಒಂದೂವರೆ ವರ್ಷದ ನಂತರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕಾಣಿಸಿತೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಿನ್ನಾಸ್ವಾಮಿ ಸ್ಟೇಡಿಯಂನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಿದ ಯುವಕ

Published on: Mar 05, 2024 11:55 AM