ಬಿಕೆ ಹರಿಪ್ರಸಾದ್ ತಮ್ಮ ಸಮಾಜದ ಬಗ್ಗೆ ಮಾತಾಡೋದು ಪಕ್ಷ ವಿರೋಧಿ ಚಟುವಟಿಕೆ ಹೇಗಾಗುತ್ತದೆ? ಪ್ರಿಯಾಂಕ್ ಖರ್ಗೆ

|

Updated on: Sep 11, 2023 | 4:23 PM

ಹರಿಪ್ರಸಾದ್ ಅವರ ಮಾತುಗಳ ಬಗ್ಗೆ ಖುದ್ದು ಮುಖ್ಯಮಂತ್ರಿ ಸಿದ್ದಾಮಯ್ಯನವರೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಇನ್ನು ತಾನು ಏನು ಹೇಳಲಾಗುತ್ತೆ ಎಂದು ಕೇಳಿದ ಅವರು, ಹರಿಪ್ರಸಾದ್ ತಮ್ಮ ಮಾತುಗಳಲ್ಲಿ ಎಲ್ಲೂ ಮುಖ್ಯಮಂತ್ರಿಯ ಹೆಸರನ್ನು ಪ್ರಸ್ತಾಪಿಸಿಲ್ಲ ಮತ್ತು ಸಿದ್ದರಾಮಯ್ಯ ಕೂಡ ಅದನ್ನೇ ಹೇಳಿದ್ದಾರೆ ಎಂದರು.

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪರೋಕ್ಷ ದಾಳಿ ನಡೆಸುತ್ತಿರುವ ಪಕ್ಷದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ (BK Hariprasad) ಅವರ ವರಸೆಯನ್ನು ಖಂಡಿಸಲಿಲ್ಲ, ಸಮರ್ಥಿಸಿಕೊಳ್ಳಲೂ ಇಲ್ಲ. ಪ್ರಸಾದ್, ತಮ್ಮ ಸಮಾಜದ ಬಗ್ಗೆ ಮಾತಾಡಿದ್ದಾರೆ ಮತ್ತು ಅದರ ಸಂಘಟನೆಗಾಗಿ ಓಡಾಡುತ್ತಿದ್ದಾರೆ, ಅವರು ತಮ್ಮ ಸಮಾಜಕ್ಕಾಗಿ ಮಾಡುವ ಕೆಲಸವನ್ನು ಪಕ್ಷವಿರೋಧಿ ಚಟುವಟಿಕೆ ಅಂತ ಹೇಗೆ ಹೇಳಲಾಗುತ್ತೆ ಎಂದು ಪ್ರಿಯಾಂಕ್ ಹೇಳಿದರು. ಹರಿಪ್ರಸಾದ್ ಪಕ್ಷದ ಒಬ್ಬ ಹಿರಿಯ ಹಾಗೂ ಅನುಭವಿ ನಾಯಕ, ಅವರಿಗೆ ತಮ್ಮ ಜವಾಬ್ದಾರಿ ಗೊತ್ತಿದೆ, ರಾಜ್ಯಮಟ್ಟದಲ್ಲದೆ, ರಾಷ್ಟ್ರಮಟ್ಟದಲ್ಲೂ ಹಿರಿಯ ನಾಯಕರೆಲ್ಲ ಅವರಿಗೆ ಗೊತ್ತು ಎಂದು ಖರ್ಗೆ ಹೇಳಿದರು. ಅವರ ಮಾತುಗಳ ಬಗ್ಗೆ ಖುದ್ದು ಮುಖ್ಯಮಂತ್ರಿ ಸಿದ್ದಾಮಯ್ಯನವರೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಇನ್ನು ತಾನು ಏನು ಹೇಳಲಾಗುತ್ತೆ ಎಂದು ಕೇಳಿದ ಅವರು, ಹರಿಪ್ರಸಾದ್ ತಮ್ಮ ಮಾತುಗಳಲ್ಲಿ ಎಲ್ಲೂ ಮುಖ್ಯಮಂತ್ರಿಯ ಹೆಸರನ್ನು ಪ್ರಸ್ತಾಪಿಸಿಲ್ಲ ಮತ್ತ್ತು ಸಿದ್ದರಾಮಯ್ಯ ಕೂಡ ಅದನ್ನೇ ಹೇಳಿದ್ದಾರೆ ಎಂದರು. ನಂಜೇಗೌಡರು, ಹರಿಪ್ರಸಾದ್ ವಿರುದ್ಧ ಹೈಕಮಾಂಡ್ ಗೆ ಏನಂತ ದೂರು ನೀಡಿದ್ದಾರೆ ಅಂತ ತಮಗೆ ಗೊತ್ತಿಲ್ಲ ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ