ಮೈಸೂರು: ಸಫಾರಿಗೆ ಹೋದ ಪ್ರವಾಸಿಗರ ಕ್ಯಾಮೆರಾಗೆ ಪೋಸ್ ಕೊಟ್ಟು ಆಟವಾಡಿದ ಕರಿ ಚಿರತೆ ವಿಡಿಯೋ ಇಲ್ಲಿದೆ
ಅಪರೂಪದ ಕರಿ ಚಿರತೆ ಕಂಡು ಪ್ರವಾಸಿಗರು ಹ್ಯಾಪಿ ಆಗಿದ್ದರು. ಇನ್ನು ಕಾಡಿನ ನೀರಿನ ಹೊಂಡದ ಬಳಿ ಹುಲಿ ಕಾಣಿಸಿಕೊಂಡಿದೆ. ನೀರು ಕುಡಿಯಲು ಬಂದಿದ್ದ ಹುಲಿ, ನೀರು ಕುಡಿದು ರಸ್ತೆ ದಾಟಿದೆ.
ಮೈಸೂರು: ವೀಕೆಂಡ್ ಸಫಾರಿಗೆ (Safari) ಹೋದವರಿಗೆ ಡಬಲ್ ಧಮಾಕ ಸಿಕ್ಕಿದೆ. ಸಫಾರಿಗೆ ಹೋದ ಪ್ರವಾಸಿಗರಿಗೆ ಕರಿ ಚಿರತೆ (Black Leopard) ಹಾಗೂ ಹುಲಿ (Tiger) ಕಾಣಿಸಿಕೊಂಡಿದೆ. ಎಚ್ ಡಿ ಕೋಟೆ ತಾಲೂಕಿನ ದಮ್ಮನಕಟ್ಟೆ ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಯಲ್ಲಿ ಸಫಾರಿಗೆ ಹೋದ ವೇಳೆ ಕರಿ ಚಿರತೆ, ಹುಲಿ ದರ್ಶನವಾಗಿದೆ. ಕರಿ ಚಿರತೆ ನೋಡಿದ ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ. ಕ್ಯಾಮೆರಾಗೆ ಪೋಸ್ ನೀಡಿ ಚಿರತೆ ಆಟವಾಡಿದೆ. ಮರ ಹತ್ತುವುದು, ಇಳಿಯುವ ಆಟವಾಡಿದೆ. ಅಪರೂಪದ ಕರಿ ಚಿರತೆ ಕಂಡು ಪ್ರವಾಸಿಗರು ಹ್ಯಾಪಿ ಆಗಿದ್ದರು. ಇನ್ನು ಕಾಡಿನ ನೀರಿನ ಹೊಂಡದ ಬಳಿ ಹುಲಿ ಕಾಣಿಸಿಕೊಂಡಿದೆ. ನೀರು ಕುಡಿಯಲು ಬಂದಿದ್ದ ಹುಲಿ, ನೀರು ಕುಡಿದು ರಸ್ತೆ ದಾಟಿದೆ. ಈ ವೇಳೆ ಹುಲಿ ದೃಶ್ಯವನ್ನು ಪ್ರವಾಸಿಗರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಇದನ್ನೂ ಓದಿ
9ನೇ ತರಗತಿ ಹುಡುಗನಿಂದ ಹೋಯ್ತು 4 ಮಹಿಳೆಯರ ಪ್ರಾಣ; ಕಣ್ಣುಜ್ಜಲು ಹೋಗಿ ಕಾರು ಫೂಟ್ಪಾತ್ ಹತ್ತಿಸಿದ ಹುಡುಗ
ಇಂದು ವಿಶ್ವಾಸದ್ರೋಹದ ದಿನ ಆಚರಿಸುವುದಾಗಿ ರೈತ ಮುಖಂಡ ರಾಕೇಶ್ ಟಿಕಾಯತ್ ಘೋಷಣೆ; ಕೇಂದ್ರದ ವಿರುದ್ಧ ಮತ್ತೆ ಸಿಡಿಮಿಡಿ