Video: ಕುತ್ತಿಗೆಗೆ ಕತ್ತಿ ಹಿಡಿದು ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು

Updated on: Jan 11, 2026 | 11:38 AM

ಪಂಜಾಬ್‌ನ ಅಮೃತಸರದಲ್ಲಿ ನಡೆದ ಆಘಾತಕಾರಿ ಹಗಲು ದರೋಡೆ ನಗರದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಶಸ್ತ್ರಸಜ್ಜಿತ ದಾಳಿಕೋರರು ಸಾರ್ವಜನಿಕರ ಮುಂದೆಯೇ ಆಭರಣ ವ್ಯಾಪಾರಿಯ ಮೇಲೆ ದಾಳಿ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಆಭರಣ ವ್ಯಾಪಾರಿಯನ್ನು ಮೊದಲು ಕಾರಿನಿಂದ ಗುದ್ದಿ, ನಂತರ ಕತ್ತಿಗಳನ್ನು ಹಿಡಿದ ಗೂಂಡಾಗಳು ಆತನ ಹಿಂದೆ ಓಡುತ್ತಿರುವುದು ಕಂಡುಬರುತ್ತಿದೆ.

ಅಮೃತಸರ, ಜನವರಿ 11: ಪಂಜಾಬ್‌ನ ಅಮೃತಸರದಲ್ಲಿ ನಡೆದ ಆಘಾತಕಾರಿ ಹಗಲು ದರೋಡೆ ನಗರದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಶಸ್ತ್ರಸಜ್ಜಿತ ದಾಳಿಕೋರರು ಸಾರ್ವಜನಿಕರ ಮುಂದೆಯೇ ಆಭರಣ ವ್ಯಾಪಾರಿಯ ಮೇಲೆ ದಾಳಿ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಆಭರಣ ವ್ಯಾಪಾರಿಯನ್ನು ಮೊದಲು ಕಾರಿನಿಂದ ಗುದ್ದಿ, ನಂತರ ಕತ್ತಿಗಳನ್ನು ಹಿಡಿದ ಗೂಂಡಾಗಳು ಆತನ ಹಿಂದೆ ಓಡುತ್ತಿರುವುದು ಕಂಡುಬರುತ್ತಿದೆ.

ದಾಳಿಕೋರರು ಕತ್ತಿಗಳು ಸೇರಿದಂತೆ ಹರಿತವಾದ ಆಯುಧಗಳನ್ನು ಹೊಂದಿದ್ದರು. ಅವರು ಆಭರಣ ವ್ಯಾಪಾರಿಯನ್ನು ಸುತ್ತುವರೆದು ಹಿಂಸಾತ್ಮಕ ಹಲ್ಲೆ ನಡೆಸಿ, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಸುಮಾರು 425 ಗ್ರಾಂ ಚಿನ್ನವನ್ನು ಲೂಟಿ ಮಾಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ