AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ

ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ

ಸುಷ್ಮಾ ಚಕ್ರೆ
|

Updated on: Apr 01, 2026 | 9:36 PM

Share

ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಎಸೆಯಲಾಗಿದ್ದು, ದಾಳಿ ನಡೆಸಿದ ಇಬ್ಬರು ಶಂಕಿತರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸೆಕ್ಟರ್ 37ರಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಬಳಿ ವ್ಯಕ್ತಿಯೊಬ್ಬ ಗ್ರೆನೇಡ್‌ನಿಂದ ಪಿನ್ ಹೊರತೆಗೆದು ಎಸೆಯುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಗ್ರೆನೇಡ್ ಸ್ಕೂಟರ್ ಬಳಿ ಬಿದ್ದು ಸ್ಫೋಟಗೊಂಡಿದೆ. ಬೈಕ್​ನಲ್ಲಿ ಬಂದ ಇಬ್ಬರು ಶಂಕಿತರು ಈ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರೆನೇಡ್ ಎಸೆದ ನಂತರ ಶಂಕಿತರಲ್ಲಿ ಒಬ್ಬರು ಓಡಿಹೋಗುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ಸ್ಫೋಟದ ನಂತರ ಇಬ್ಬರು ದಾಳಿಕೋರರು ತಮ್ಮ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿಯಲ್ಲಿ ಅವರ ಮುಖಗಳು ಸೆರೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅವರು ಹೇಳಿದರು.

ನವದೆಹಲಿ, ಏಪ್ರಿಲ್ 1: ಚಂಡೀಗಢದ ಪಂಜಾಬ್ ಬಿಜೆಪಿ ಕಚೇರಿಯ (BJP Office) ಹೊರಗೆ ಇಂದು ಸ್ಫೋಟ ಸಂಭವಿಸಿದೆ. ಸೆಕ್ಟರ್ 37ರಲ್ಲಿರುವ ಕಚೇರಿಯ ಬಳಿಯ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಗ್ರೆನೇಡ್ ಅನ್ನು ಎಸೆಯುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಚಂಡೀಗಢದ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕೈಯಲ್ಲಿ ಹೆಲ್ಮೆಟ್ ಹಿಡಿದಿರುವ ವ್ಯಕ್ತಿಯೊಬ್ಬ ಗ್ರೆನೇಡ್ ತೆಗೆದು ಎಸೆಯುತ್ತಿರುವುದನ್ನು ಇನ್ನೊಬ್ಬ ವ್ಯಕ್ತಿ ರೆಕಾರ್ಡ್ ಮಾಡಿದ್ದಾನೆ. ಬಳಿಕ ಭಾರೀ ಸ್ಫೋಟದ ಸದ್ದು ಕೇಳುತ್ತದೆ. ದಾಳಿ ನಡೆಸಿದ ಇಬ್ಬರು ಶಂಕಿತರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಿಸಿಟಿವಿಯಲ್ಲಿ ಅವರ ಮುಖಗಳು ಸೆರೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us