ದರ್ಶನ್ ಕಾಣಲು 22 ಕಿ.ಮೀ ಕಾಲ್ನಡಿಗೆಯಲ್ಲಿ ಬಂದ ಅಂಧ ಅಭಿಮಾನಿ

ದರ್ಶನ್ ಕಾಣಲು 22 ಕಿ.ಮೀ ಕಾಲ್ನಡಿಗೆಯಲ್ಲಿ ಬಂದ ಅಂಧ ಅಭಿಮಾನಿ

ಮಂಜುನಾಥ ಸಿ.
|

Updated on:Sep 15, 2024 | 1:27 PM

Darshan: ನಟ ಏನು ಮಾಡಿದರೂ ಅವನ ಬೆಂಬಲಿಸುವ, ಅನುಸರಿಸುವ ಅಭಿಮಾನಿಗಳನ್ನು ಅಂಧಾಭಿಮಾನಿಗಳು ಎನ್ನುತ್ತಾರೆ. ದರ್ಶನ್ ಅಭಿಮಾನಿಗಳನ್ನು ಹಾಗೆಯೇ ಕರೆಯಲಾಗುತ್ತದೆ. ಇದೀಗ ನಿಜಕ್ಕೂ ಒಬ್ಬ ಅಂಧ ಅಭಿಮಾನಿ ಬಳ್ಳಾರಿ ಜೈಲಿನ ಬಳಿ ಬಂದು ತಾನು ದರ್ಶನ್ ಅನ್ನು ಭೇಟಿಯಾಗಲೇ ಬೇಕೆಂದು ಒತ್ತಾಯಿಸಿದ್ದಾನೆ.

ವ್ಯಕ್ತಿಯೊಬ್ಬ ಏನೇ ಮಾಡಿದರೂ ಆತನನ್ನು ನಂಬುವುದು, ಅನುಸರಿಸುವುದು, ಮೆಚ್ಚುವುದನ್ನು ಅಂಧಾಭಿಮಾನ ಎನ್ನುತ್ತಾರೆ. ದರ್ಶನ್ ವಿಚಾರದಲ್ಲಿ ಅದೇ ಆಗಿದೆ. ಇದೀಗ ನಿಜಕ್ಕೂ ಒಂದು ಅಂಧ ಅಭಿಮಾನಿ ಸುಮಾರು 22 ಕಿ.ಮೀ ದೂರದಿಂದ ನಡೆದುಕೊಂಡು ಬಳ್ಳಾರಿ ಜೈಲಿನ ಬಳಿ ಬಂದಿದ್ದು ದರ್ಶನ್ ಅನ್ನು ಭೇಟಿಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಪೊಲೀಸರ ಬಳಿಕ ಮನವಿ ಮಾಡಿದ್ದಾರೆ. ಬಹಳ ಕಾಲ ಜೈಲಿನ ಮುಂದೆ ಕಾಯುತ್ತಿದ್ದ ಅಂಧ ಅಭಿಮಾನಿಯನ್ನು ಕೊನೆಗೆ ಪೊಲೀಸರೇ ಕರೆದುಕೊಂಡು ಹೋಗಿ ವಾಪಸ್ ಬಿಟ್ಟುಬಂದಿದ್ದಾರೆ. ಈ ಹಿಂದೆಯೂ ಕೆಲವು ಅಭಿಮಾನಿಗಳು ಜೈಲಿನ ಬಳಿ ಬಂದು ದರ್ಶನ್ ಅನ್ನು ನೋಡಲು ಒತ್ತಾಯಿಸಿದ್ದರು. ಆದರೆ ದರ್ಶನ್​ರ ಮೊದಲ ರಕ್ತ ಸಂಬಂಧಿಗಳಿಗೆ ಬಿಟ್ಟರೆ ಇನ್ಯಾರಿಗೂ ಸಹ ದರ್ಶನ್ ಅನ್ನು ನೋಡುವ ಅವಕಾಶ ನೀಡಲಾಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 15, 2024 01:22 PM