ರಾಜಾಜಿನಗರ ಮೆಟ್ರೋ ಸ್ಟೇಷನ್ ಬಳಿ ಹಳಿಗಳ ಮೇಲೆ ಕೆಟ್ಟು ನಿಂತಿದ್ದ ರೋಡ್-ಕಮ್-ರೇಲ್ ವಾಹನವನ್ನು ಕೆಳಗಿಳಿಸಿದ್ದು ಒಂದು ರೋಮಾಂಚಕ ಕಾರ್ಯಾಚರಣೆ!

ರಾಜಾಜಿನಗರ ಮೆಟ್ರೋ ಸ್ಟೇಷನ್ ಬಳಿ ಹಳಿಗಳ ಮೇಲೆ ಕೆಟ್ಟು ನಿಂತಿದ್ದ ರೋಡ್-ಕಮ್-ರೇಲ್ ವಾಹನವನ್ನು ಕೆಳಗಿಳಿಸಿದ್ದು ಒಂದು ರೋಮಾಂಚಕ ಕಾರ್ಯಾಚರಣೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 03, 2023 | 6:12 PM

ರೇಲ್ ವಾಹನವನ್ನು ಕೆಳಗಿಳಿಸುವಾಗ ಅದು ಅಲ್ಲಾಡದ ಹಾಗೆ ಮತ್ತು ಜಾರದ ಹಾಗೆ ನಾಲ್ಕು ಕಡೆಗಳಿಂದ ಬೆಲ್ಟ್ ಗಳನ್ನು ಬಿಗಿಯಲಾಗಿತ್ತು. ವಾಹನವನ್ನು ಲಿಫ್ಟ್ ಬಹಳ ಸಾವಕಾಶವಾಗಿ ಮತ್ತು ಅತ್ಯಂತ ಜಾಗರೂಕತೆಯಿಂದ ಕೆಳಗಿಳಿಸಿತು. ಕಾರ್ಯಾಚರಣೆ ಯಾವುದೇ ಹಾನಿಯಾಗದ ಹಾಗೆ ಪೂರ್ಣಗೊಂಡಾಗ ಬಿಎಂಆರ್ ಸಿಎಲ್ ಸಿಬ್ಬಂದಿ ನಿಟ್ಟುಸಿರಾಗಿ ವಿಜಯದ ಕೇಕೇ ಹಾಕಿತು.

ಬೆಂಗಳೂರು: ಇಂದು ಬೆಳಗ್ಗೆ ಬಿಎಂಆರ್ ಸಿಎಲ್ ಗ್ರೀನ್ ಲೈನ್ (BMRCL Green Line) ಭಾಗವಾಗಿರುವ ರಾಜಾಜಿನಗರ ಮೆಟ್ರೋ ಸ್ಟೇಶನ್ ನಲ್ಲಿ (Rajajinagar Metro Station) ಟೆಸ್ಟಿಂಗ್ ಉದ್ದೇಶಗಳಿಗೆ ಬಳಸುವ ರೋಡ್-ಕಮ್-ರೇಲ್ ವಾಹನವು (road-cim rail vehicle) ಹಳಿಗಳ ಮೇಲೆ ಕೆಟ್ಟು ನಿಂತಿದ್ದರಿಂದ ಯಶವಂತಪುರ ಮತ್ತು ಮಂತ್ರಿ ಸ್ಕ್ವೇರ್ ಸಂಪಿಗೆ ರೋಡ್ ನಡುವೆ ಮೆಟ್ರೋ ರೈಲು ಸೇವೆ ಬಹಳ ಸಮಯದವರೆಗೆ ಸ್ಥಗಿತಗೊಂಡಿದನ್ನು ಬೆಳಗ್ಗೆಯೇ ವರದಿ ಮಾಡಲಾಗಿದೆ. ಹಳಿಗಳ ಮೇಲೆ ಕೆಟ್ಟು ನಿಂತಿದ್ದ ರೋಡ್-ಕಮ್-ರೇಲ್ ವಾಹನವನ್ನು ಬಿಎಂಆರ್ ಸಿಎಲ್ ಸಿಬ್ಬಂದಿಯು ಒಂದು ಬೃಹತ್ ಕ್ರೇನ್ ಮೂಲಕ ಕೆಳಗಿಳಿಸಿತು. ಈ ಕುತೂಹಲಕಾರಿ ಕಾರ್ಯಾಚರಣೆಯನ್ನು ಈ ವಿಡಿಯೋದಲ್ಲಿ ವೀಕ್ಷಿಸಬಹುದು. ರೇಲ್ ವಾಹನವನ್ನು ಕೆಳಗಿಳಿಸುವಾಗ ಅದು ಅಲ್ಲಾಡದ ಹಾಗೆ ಮತ್ತು ಜಾರದ ಹಾಗೆ ನಾಲ್ಕು ಕಡೆಗಳಿಂದ ಬೆಲ್ಟ್ ಗಳನ್ನು ಬಿಗಿಯಲಾಗಿತ್ತು. ವಾಹನವನ್ನು ಲಿಫ್ಟ್ ಬಹಳ ಸಾವಕಾಶವಾಗಿ ಮತ್ತು ಅತ್ಯಂತ ಜಾಗರೂಕತೆಯಿಂದ ಕೆಳಗಿಳಿಸಿತು. ಕಾರ್ಯಾಚರಣೆ ಯಾವುದೇ ಹಾನಿಯಾಗದ ಹಾಗೆ ಪೂರ್ಣಗೊಂಡಾಗ ಬಿಎಂಆರ್ ಸಿಎಲ್ ಸಿಬ್ಬಂದಿ ನಿಟ್ಟುಸಿರಾಗಿ ವಿಜಯದ ಕೇಕೇ ಹಾಕಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ