ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!

Updated on: Feb 09, 2026 | 3:10 PM

ಬ್ರೇಕ್ ಫೇಲ್ ಆಗಿ ಬಿಎಂಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಭೀಕರ ಅಪಘಾತ ಭಾನುವಾರ ಸಂಜೆ ಕಮಲಾನಗರದಲ್ಲಿ ಸಂಭವಿಸಿದೆ. ಸಂಜೆ 6.49ರ ಸುಮಾರಿಗೆ ಡಾ. ರಾಜ್ ಕುಮಾರ್ ಸರ್ಕಲ್ ಬಳಿ ಈ ಘಟನೆ ನಡೆದಿದ್ದು, ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ನಿಯಂತ್ರಣ ತಪ್ಪಿದ ಬಸ್ ಜನರ ಮೇಲೆ ನುಗ್ಗುವ ಹಂತಕ್ಕೆ ಬಂದಿದ್ದು, ಕೂದಲೆಳೆಯ ಅಂತರದಲ್ಲಿ ಯುವಕನೊಬ್ಬ ಪಾರಾಗಿದ್ದಾನೆ. ಆಟೋ ಚಾಲಕ, ಪ್ಯಾಸೆಂಜರ್ಸ್ ಹಾಗೂ ಬೈಕ್ ಸವಾರರು ಮಹಾ ಅಪಾಯದಿಂದ ತಪ್ಪಿಸಿಕೊಂಡರೂ ಆಟೋ ಹಾಗೂ ಬೈಕ್‌ಗೆ ಹಾನಿಯಾಗಿದೆ. ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೆಂಗಳೂರು, ಫೆಬ್ರವರಿ 09: ಬ್ರೇಕ್ ಫೇಲ್ ಆಗಿ ಬಿಎಂಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಭೀಕರ ಅಪಘಾತ ಭಾನುವಾರ ಸಂಜೆ ಕಮಲಾನಗರದಲ್ಲಿ ಸಂಭವಿಸಿದೆ. ಸಂಜೆ 6.49ರ ಸುಮಾರಿಗೆ ಡಾ. ರಾಜ್ ಕುಮಾರ್ ಸರ್ಕಲ್ ಬಳಿ ಈ ಘಟನೆ ನಡೆದಿದ್ದು, ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ನಿಯಂತ್ರಣ ತಪ್ಪಿದ ಬಸ್ ಜನರ ಮೇಲೆ ನುಗ್ಗುವ ಹಂತಕ್ಕೆ ಬಂದಿದ್ದು, ಕೂದಲೆಳೆಯ ಅಂತರದಲ್ಲಿ ಯುವಕನೊಬ್ಬ ಪಾರಾಗಿದ್ದಾನೆ. ಆಟೋ ಚಾಲಕ, ಪ್ಯಾಸೆಂಜರ್ಸ್ ಹಾಗೂ ಬೈಕ್ ಸವಾರರು ಮಹಾ ಅಪಾಯದಿಂದ ತಪ್ಪಿಸಿಕೊಂಡರೂ ಆಟೋ ಹಾಗೂ ಬೈಕ್‌ಗೆ ಹಾನಿಯಾಗಿದೆ. ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Follow Us
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More