ಮಾಗಡಿ ರಸ್ತೆಯಲ್ಲಿ ಅಪಘಾತಕ್ಕೀಡಾಯಿತು ಬಿ ಎಮ್ ಟಿಸಿಯ ಎಲೆಕ್ಟ್ರಿಕ್ ಬಸ್, ಯಾರಿಗೂ ಗಾಯವಾಗಿಲ್ಲ
ಈ ರಸ್ತೆಯ ಟೋಲ್ಗೇಟ್ ಅಂಡರ್ ಪಾಸ್ ನಲ್ಲಿ ಬಸ್ಸು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಅದನ್ನು ಬೀಳಿಸಿ ಪಕ್ಕದ ರಸ್ತೆಗೆ ಹೋಗಿ ನಿಂತು ಬಿಟ್ಟಿದೆ. ಸದರಿ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) ಸೇರಿದ ಎಲೆಕ್ಟ್ರಿಕ್ ಬಸ್ಸೊಂದು (electric bus) ಅಪಘಾತಕ್ಕೀಡಾದ ಘಟನೆ ನಗರದ ಮಾಗಡಿ ರಸ್ತೆಯಲ್ಲಿ (Magadi road) ನಡೆದಿದೆ. ಈ ರಸ್ತೆಯ ಟೋಲ್ಗೇಟ್ ಅಂಡರ್ ಪಾಸ್ ನಲ್ಲಿ ಬಸ್ಸು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಅದನ್ನು ಬೀಳಿಸಿ ಪಕ್ಕದ ರಸ್ತೆಗೆ ಹೋಗಿ ನಿಂತು ಬಿಟ್ಟಿದೆ. ಸದರಿ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ; ಬಸ್ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರೆಲ್ಲ ಸುರಕ್ಷಿತವಾಗಿದ್ದಾರೆ.
Latest Videos