ಹಲಸಿನ ಹಣ್ಣು ತಿನ್ನುವಾಸೆಯಿಂದ ಮರಹತ್ತಿದ ಕರಡಿ ತಂತಿಗೆ ಸಿಲುಕಿಕೊಂಡು ರಾತ್ರಿಯೆಲ್ಲ ನರಳಾಡಿದ್ದು ತುಮಕೂರಲ್ಲಿ!

ಹಲಸಿನ ಹಣ್ಣು ತಿನ್ನುವಾಸೆಯಿಂದ ಮರಹತ್ತಿದ ಕರಡಿ ತಂತಿಗೆ ಸಿಲುಕಿಕೊಂಡು ರಾತ್ರಿಯೆಲ್ಲ ನರಳಾಡಿದ್ದು ತುಮಕೂರಲ್ಲಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 14, 2022 | 1:59 PM

ಬೆಳಗ್ಗೆ ಅದರ ನರಳಾಟ ಕೇಳಿಸಿಕೊಂಡ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಪೋನ್ ಮಾಡಿದ್ದಾರೆ. ಅವರು ಬಲೆ ಎತ್ತಿಕೊಂಡು ಬಂದು ಅದನ್ನು ಹಿಡಿದೊಯ್ದಿದ್ದಾರೆ.

ತುಮಕೂರು: ಈ ಕರಡಿಗೆ (bear) ಹಲಸಿನ ಹಣ್ಣು (jackfruit) ಬಹಳ ಇಷ್ಟ ಅಂತ ಕಾಣುತ್ತೆ. ಆದರೆ ಅದನ್ನು ತಿನ್ನಲು ಹೋಗಿ ಮುಳ್ಳುತಂತಿಗೆ ಸಿಕ್ಹಾಕಿಕೊಂಡಿದ್ದು ಮಾತ್ರ ಅದರ ದುರಾದೃಷ್ಟ. ತುಮಕೂರಿನ ಕೊರಟಗೆರೆ ತಾಲ್ಲೂಕಿನ ಕುರಂಕೋಟೆ (Kuramkote) ಗ್ರಾಮದ ಸಿದ್ದರಾಜು ಎನ್ನುವವರ ಜಮೀನಲ್ಲಿರುವ ಹಲಸಿನ ಮರ ಹತ್ತಿದ ಕರಡಿ ಮರಕ್ಕೆ ಕಟ್ಟಿದ್ದ ತಂತಿಯೊಂದಕ್ಕೆ ಸಿಲುಕಿಕೊಂಡು ಬುಧವಾರ ರಾತ್ರಿಯೆಲ್ಲ ಒದ್ದಾಡಿದೆ, ಚೀರಾಡಿದೆ. ಬೆಳಗ್ಗೆ ಅದರ ನರಳಾಟ ಕೇಳಿಸಿಕೊಂಡ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಪೋನ್ ಮಾಡಿದ್ದಾರೆ. ಅವರು ಬಲೆ ಎತ್ತಿಕೊಂಡು ಬಂದು ಅದನ್ನು ಹಿಡಿದೊಯ್ದಿದ್ದಾರೆ.

ಇದನ್ನು ಓದಿ:   ನೇರ ಪ್ರಸಾರದಲ್ಲಿ ಬಾಲಕನಿಗೆ ಕಪಾಳಮೋಕ್ಷ ಮಾಡಿದ ಪಾಕ್​ ಪತ್ರಕರ್ತೆ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್