ಅಣ್ಣಾವ್ರ ಸಿನಿಮಾದ ಹಾಡು ಹಾಡಿದ ಬಾಲಿವುಡ್ ಸ್ಟಾರ್ ನಟ: ವಿಡಿಯೋ ನೋಡಿ
Dr Rajkumar: ಹಿಂದಿ ಸಿನಿಮಾ ನಟರುಗಳಿಗೆ ಡಾ ರಾಜ್ಕುಮಾರ್ ಅವರ ಬಗ್ಗೆ ವಿಪರೀತ ಗೌರವ, ಪ್ರೀತಿ ಇತ್ತು. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಒಂದು ಕಾಲದ ಬಾಲಿವುಡ್ ಸ್ಟಾರ್ ನಟ ಗೋವಿಂದ, ರಾಜ್ಕುಮಾರ್ ಅವರ ಮೇಲಿನ ಗೌರವವನ್ನು ವ್ಯಕ್ತಪಡಿಸಿದರು. ಇದರ ಜೊತೆಗೆ ರಾಜ್ಕುಮಾರ್ ಅವರ ಸಿನಿಮಾದ ಕನ್ನಡ ಹಾಡೊಂದನ್ನು ಸುಶ್ರಾವ್ಯವಾಗಿ ಹಾಡಿದರು. ವಿಡಿಯೋ ಇಲ್ಲಿದೆ.
ಡಾ ರಾಜ್ಕುಮಾರ್ (Dr Rajkumar) ಎಂದರೆ ದಕ್ಷಿಣ ಭಾರತದ ನಟರಷ್ಟೆ ಅಲ್ಲ ಹಿಂದಿ ನಟರಿಗೂ ಅಪಾರ ಗೌರವ ಮತ್ತು ಪ್ರೀತಿ. ಅಮಿತಾಬ್ ಬಚ್ಚನ್ ಸಹ ಅಣ್ಣಾವ್ರಿಗೆ ಅಪಾರ ಗೌರವ ನೀಡುತ್ತಿದ್ದರು. ಆಗಿನ ಸ್ಟಾರ್ ನಟರಾದ ಗೋವಿಂದ, ಶತ್ರುಘ್ನ ಸಿನ್ಹಾ ಇನ್ನೂ ಹಲವರು ಅದೇ ಸಾಲಿಗೆ ಸೇರುವವರು. ಇತ್ತೀಚೆಗೆ ನಟ ಗೋವಿಂದ ಅವರು ಬೆಂಗಳೂರಿಗೆ ಬಂದಿದ್ದರು. ಈ ಸಮಯದಲ್ಲಿ ಮಾಧ್ಯಮದವರೊಟ್ಟಿಗೆ ತಮ್ಮ ಹಾಗೂ ಕರ್ನಾಟಕದ ನಡುವಿನ ಬಂಧದ ಬಗ್ಗೆ ಮಾತನಾಡುತ್ತಾ, ತಮಗೆ ರಾಜ್ಕುಮಾರ್ ಅವರ ಮೇಲಿರುವ ಗೌರವ ವ್ಯಕ್ತಪಡಿಸಿದರು. ಜೊತೆಗೆ, ಕನ್ನಡ ಹಾಡನ್ನು ಸಹ ಹಾಡಿದರು. ಇಲ್ಲಿದೆ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

