ಹೊಸ ವರ್ಷದಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ಕಂಗನಾ ರಣಾವತ್​

| Updated By: ರಾಜೇಶ್ ದುಗ್ಗುಮನೆ

Updated on: Jan 01, 2022 | 2:41 PM

ಕಂಗನಾ ದೇವರ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ. ಈ ಮೊದಲು ಅವರು ಹಲವು ಬಾರಿ ಬೇರೆ ಬೇರೆ ದೇವಸ್ಥಾನಕ್ಕೆ ತೆರಳಿದ ಉದಾಹರಣೆ ಇದೆ. ಆಗಲೂ ವಿಡಿಯೋ ಹಾಗೂ ಫೋಟೋಗಳು ವೈರಲ್​ ಆಗಿತ್ತು.

ನಟಿ ಕಂಗನಾ ರಣಾವತ್​ ಬಾಲಿವುಡ್​ನಲ್ಲಿ ಬೇಡಿಕೆ ಹೊಂದಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡುತ್ತಾ ಸದಾ ಸುದ್ದಿಯಲ್ಲಿರುತ್ತಾರೆ ಅವರು. ಇಂದು (ಜನವರಿ 1) ಹೊಸ ವರ್ಷದ ಹಿನ್ನೆಲೆಯಲ್ಲಿ ಅವರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ವಿಡಿಯೋಗಳು ಹಾಗೂ ಫೋಟೋಗಳು ವೈರಲ್​ ಆಗಿದೆ. ಕಂಗನಾ ದೇವರ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ. ಈ ಮೊದಲು ಅವರು ಹಲವು ಬಾರಿ ಬೇರೆ ಬೇರೆ ದೇವಸ್ಥಾನಕ್ಕೆ ತೆರಳಿದ ಉದಾಹರಣೆ ಇದೆ. ಆಗಲೂ ವಿಡಿಯೋ ಹಾಗೂ ಫೋಟೋಗಳು ವೈರಲ್​ ಆಗಿತ್ತು. ಇತ್ತೀಚೆಗೆ ಕಂಗನಾ ಅವರು ಪೊಲೀಸ್​ ಠಾಣೆಗೆ ಸೀರೆ ಉಟ್ಟು, ಮುತ್ತಿನ ಸರ ಧರಿಸಿ ಬಂದಿದ್ದರು. ಪ್ರತಿಭಟನಾ ರೈತರನ್ನು ಉಗ್ರಗಾಮಿಗಳು ಎಂಬರ್ಥ ಬರುವಂತೆ ಟ್ವೀಟ್​ ಮಾಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು.

ಇದನ್ನೂ ಓದಿ: Liger First Glimpse: 24 ಗಂಟೆಯಲ್ಲಿ 16 ಮಿಲಿಯನ್ ವೀಕ್ಷಣೆ ಪಡೆದು ದಾಖಲೆ ಬರೆದ ವಿಜಯ್ ದೇವರಕೊಂಡ ನಟನೆಯ ಲೈಗರ್

 ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ ದಕ್ಷಿಣದ ಹೀರೋಗಳು; ಯಶಸ್ಸಿನ ನಿರೀಕ್ಷೆಯಲ್ಲಿ ವಿಜಯ್​ ದೇವರಕೊಂಡ