Bomb Threats to Schools; ಇಂಥ ಸಂದರ್ಭಗಳಲ್ಲಿ ಪೋಷಕರ ಮನಸ್ಥಿತಿ ಅರ್ಥಮಾಡಿಕೊಳ್ಳಬೇಕು: ಆರ್ ಅಶೋಕ
Bomb Threats to Schools;: ಅರ್ ಅಶೋಕ ಅವರು ಅತ್ಯಂತ ವಿವೇಚನೆಯಿಂದ ಮಾತಾಡುವುದನ್ನು ಗಮನಿಸಬಹುದು. ಇದು ಬಹಳ ಸೂಕ್ಷ್ಮ ವಿಷಯವಾಗಿರುವುದರಿಂದ ಹಾಗೆ ಅಳೆದು ತೂಗಿ ಮಾತಾಡಬೇಕಾಗುತ್ತದೆ. ಸರಕಾರದ ವೈಫಲ್ಯ ಅಂತ ಹೇಳಿ ಅದರ ತಲೆ ಮೇಲೆ ಗೂಬೆ ಕೂರಿಸೋದು ಸುಲಭ, ಆದರೆ ವಿರೋಧ ಪಕ್ಷದ ನಾಯಕ ಹಾಗೆ ಮಾಡಲಿಲ್ಲ. ವಿರೋಧ ಪಕ್ಷದ ನಾಯಕನನ್ನು ಶ್ಯಾಡೋ ಚೀಫ್ ಮಿನಿಸ್ಟರ್ ಅಂತ ಹೇಳತ್ತಾರೆ, ಅಶೋಕ ಅದರ ಸ್ಥಾನದ ಘನತೆಗೆ ತಕ್ಕಂತೆ ಮಾತಾಡಿದ್ದಾರೆ.
ಬೆಂಗಳೂರು: ನಗರದ ಕೆಲ ಶಾಲೆಗಳಿಗೆ ಬಾಂಬ್ ಬೆದರಿಕೆಯ ಸಂದೇಶಗಳು ರವಾನೆಯಾಗಿರುವ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ, ರಾಜಕೀಯ ನಾಯಕರು ಶಾಲೆಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಬೆದರಿಕೆ ಪತ್ರ ಬಂದ ಶಾಲೆಯೊಂದಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿರೋಧ ಪಕ್ಷದ ನಾಯಕ (Leader of Opposition) ಆರ್ ಅಶೋಕ (R Ashoka) ಅವರು, ನಗರದ ಹಲವಾರು ಶಾಲೆಗಳಲ್ಲಿ ಓದುವ ಮಕ್ಕಳ ಪೋಷಕರು (parents) ಆತಂಕಿತರಾಗಿ ತಮಗೆ ಪೋನ್ ಮಡುತ್ತಿದ್ದಾರೆ ಎಂದು ಹೇಳಿದರು. ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಿದೆ, ಮಕ್ಕಳು ತೊಂದರೆಯಲ್ಲಿದ್ದಾಗ, ಎಲ್ಲ ಪೋಷಕರು ಗಾಬರಿಗೊಳಗಾಗುತ್ತಾರೆ ಎಂದ ಅವರು ತಾನು ಪೊಲೀಸ್ ಕಮೀಶನರ್ ಅವರೊಂದಿಗೆ ಮಾತಾಡಿದ್ದು ಡಾಗ್ ಸ್ಕ್ವ್ಯಾಡ್ ಮತ್ತು ಬಾಂಬ್ ನಿಷ್ಕ್ರಿಯ ದಳದವರು ಶಾಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದರು. ಹಿಂದೆ ನಡೆದ ಘಟನೆ ಮತ್ತು ಈಗಿನದು ಭಿನ್ನವಾಗಿವೆ, ಆಗ ಒಬ್ಬ ವಿದ್ಯಾರ್ಥಿ ಪರೀಕ್ಷೆಗಳು ಮುಂದೂಡುವಂತಾಗಲಿ ಅಂತ ಮೇಲ್ ಕಳಿಸಿದ್ದರೆ ಈಗಿನದರಲ್ಲಿ ಧರ್ಮ, ಭಯೋತ್ಪಾದನೆಗಳ ಉಲ್ಲೇಖವಿದೆ, ಪೊಲೀಸರ ತನಿಖೆಯಿಂದ ಎಲ್ಲ ಬಯಲಾಗಲಿದೆ ಎಂದು ಅಶೋಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ