Sign In

By signing in or creating an account, you agree with Associated Broadcasting Company's Terms & Conditions and Privacy Policy.

Bomb Threats to Schools; ಬಾಂಬ್ ಬೆದರಿಕೆ ಮೇಲ್; ಬೆಂಗಳೂರಿನ ಶಾಲೆಗಳ ಅವರಣದಲ್ಲಿ ಅತಂಕಭರಿತ ಪೋಷಕರು

Bomb Threats to Schools; ಬಾಂಬ್ ಬೆದರಿಕೆ ಮೇಲ್; ಬೆಂಗಳೂರಿನ ಶಾಲೆಗಳ ಅವರಣದಲ್ಲಿ ಅತಂಕಭರಿತ ಪೋಷಕರು

ಅರುಣ್​ ಕುಮಾರ್​ ಬೆಳ್ಳಿ
|

Updated on:Dec 01, 2023 | 2:07 PM

Bomb Threats to Schools; ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯೊಂದಕ್ಕೂ ಬಾಂಬ್ ಬೆದರಿಕೆಯ ಮೇಲ್ ಹೋಗಿದೆ. ಕಳೆದ ವರ್ಷ ಇಂಥ ಘಟನೆ ನಡೆದಾಗ ಪೊಲೀಸರು ಯಾವ ಕ್ರಮ ತೆಗೆದುಕೊಂಡಿದ್ದರು ಅನ್ನೋದು ಗೊತ್ತಾಗಿಲ್ಲ. ಆಗಿನ ಕಿಡಿಗೇಡಿಗಳು ಅಥವಾ ವಿಘ್ನಸಂತೋಷಿಗಳನ್ನು ಕಠಿಣ ಶಿಕ್ಷೆಗೆ ಗುರಿಮಾಡಿದ್ದರೆ, ಪ್ರಾಯಶಃ ಘಟನೆಯ ಪುನರಾವರ್ತನೆ ಆಗುತ್ತಿರಲಿಲ್ಲ. ಇದು ಆಗಿನ ದುಷ್ಟರ ಕೃತ್ಯ ಆಗಿರುವ ಸಾಧ್ಯತೆಯೂ ಇದೆ.

ಬೆಂಗಳೂರು: ನಗರದ ಬಸವೇಶ್ವರನಗರದಲ್ಲಿರುವ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆಯ ಮೇಲ್ ಗಳು (Bomb Threat Mails) ಬಂದಿರುವ ಹಿನ್ನೆಲೆಯಲ್ಲಿ ಪೋಷಕರು ವಿಪರೀತ ಆತಂಕಗೊಂಡಿದ್ದಾರೆ. ಕೇವಲ ಅಲ್ಲಿ ಮಾತ್ರವಲ್ಲ, ನಗತದ ಬಹತೇಕ ಶಾಲಾಕಾಲೇಜುಗಳನ್ನು (school, colleges) ಈವತ್ತಿನಮಟ್ಟಿಗೆ ಮುಚ್ಚಿಸಿ ಮಕ್ಕಳನ್ನು ಮನೆಗಳಿಗೆ ಕಳಿಸಲಾಗುತ್ತಿದೆ. ಶಾಲೆಗಳ ಮುಂದೆ, ಆವರಣಗಳಲ್ಲಿ ಆತಂಕಿತ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ಯಲು ನೆರೆದಿದ್ದಾರೆ. ಟಿವಿ9 ಕನ್ನಡ ವಾಹಿನಿಯ ವರದಿಗಾರ ಪೋಷಕರೊಬ್ಬರೊಂದಿಗೆ (parent) ಮಾತಾಡಿದ್ದು ಅವರು ತಮ್ಮ ಮಗ 12ನೇ ತರಗತಿಯ ವೈವಾ ಪರೀಕ್ಷೆಗಾಗಿ ಶಾಲೆಯೊಳಗಿರುವನೆಂದು ಹೇಳುತ್ತಾರೆ. ಶಾಲೆಯ ಅಡಳಿತ ಮಂಡಳಿ ವೈವಾವನ್ನು ರೀ-ಶೆಡ್ಯೂಲ್ ಮಾಡುತ್ತಾರೋ ಅಥವಾ ಆತಂಕಮಯ ವಾತಾವರವರಣದಲ್ಲಿ ಇಂದೇ ನಡೆಸುತ್ತಾರೋ ಎಂಬ ಗೊಂದಲವೂ ಅವರಿಗಿದೆ. ಶಾಲಾ ಸಿಬ್ಬಂದಿ ತುರ್ತಾಗಿ ಬನ್ನಿ ಅಂತಷ್ಟೇ ಹೇಳಿ ಪೋಷಕರನ್ನು ಶಾಲೆಗೆ ಕರೆಸಿಕೊಂಡಿದೆ. ಅದು ಒಳ್ಳೆಯ ಕ್ರಮವೇ, ಬಾಂಬ್ ಬೆದರಿಕೆ ವಿಷಯ ಹೇಳಿದರೆ ಅವರು ವಿಪರೀತ ಆತಂಕದಲ್ಲಿ ಬರಬೇಕಾಗುತಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 01, 2023 12:28 PM