ಒಂದೇ ವೇದಿಕೆಯ ಮೇಲೆ ಅಕ್ಕಪಕ್ಕ ಕೂತ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ ಗಹನ ಚರ್ಚೆಯಲ್ಲಿ ತೊಡಗಿದ್ದರು!
ಬೇರೆ ಬೇರೆ ಸಮುದಾಯಗಳು ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರನ್ನು ವೇದಿಕೆಯ ಮೇಲೆ ಸನ್ಮಾನಿಸಿದವು. ಗೋವಿಂದ ಕಾರಜೋಳ ಅವರು ಸನ್ಮಾನ ಮಾಡುವಾಗ ಬೊಮ್ಮಾಯಿ ಹಾರ ಹಾಕಿಸಿಕೊಳ್ಳುವುದಿಲ್ಲ. ನಿಮಗೆ ಗೊತ್ತಲ್ಲ. ಹೂವಿನ ಹಾರಗಳ ಸನ್ಮಾನ ನನಗೆ ಬೇಡ ಅಂತ ಹೇಳಿದ್ದಾರೆ. ಹಾಗಾಗಿ ಬೇಡ ಅನ್ನುತ್ತಾರೆ.
ಇದೊಂದು ಅಪರೂಪದ ದೃಶ್ಯ ಮಾರಾಯ್ರೇ. ವಿಧಾನ ಸಭೆಯಲ್ಲಿ ಬದ್ಧ ವೈರಿಗಳ ಹಾಗೆ ಆಡುವ ಸೈದ್ಧಾಂತಿಕವಾಗಿ ವಿರುದ್ಧ ದಿಕ್ಕಿನ ಧೃವಗಳಾಗಿರುವ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಶುಕ್ರವಾರ ಒಂದೇ ವೇದಿಕೆಯ ಮೇಲೆ ಅದರಲ್ಲೂ ಅಕ್ಕಪಕ್ಕದ ಕುರ್ಚಿಗಳಲ್ಲಿ ಆಸೀನರಾಗಿದ್ದರು. ಬಾದಾಮಿ ತಾಲ್ಲೂಕಿನ ಉಗಲವಾಟ ಗ್ರಾಮದ ಬಳಿ ಕೆರೂರು ಏತ ನೀರಾವರಿ ಯೋಜನೆ (Lift Irrigation Project) ಶಂಕುಸ್ಥಾಪನೆಯನ್ನು ಬೊಮ್ಮಾಯಿ ಅವರು ನೆರವೇರಿಸಿದ ಸಂದರ್ಭದಲ್ಲಿ ಈ ದೃಶ್ಯ ಕಂಡಿತು. ವೇದಿಕೆಯ ಮೇಲೆ ಹಲವಾರು ಘಟಾನುಘಟಿ ನಾಯಕರಿದ್ದರು. ಸಚಿವರಾದ ಸಿಸಿ ಪಾಟೀಲ, ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಪ್ರಕಾಶ ರಾಠೋಡ ಹಾಗೂ ಇನ್ನೂ ಹಲವು ಗಣ್ಯರಿದ್ದರು. ವೇದಿಕೆಯ ಮೇಲೆ ಎಲ್ಲರಿಗಿಂತ ಮೊದಲು ಸಿದ್ದರಾಮಯ್ಯ ಕಾಣಿಸಿಕೊಂಡಾಗ ಜನ ಶಿಳ್ಳೆ ಹಾಕಿ ಜೋರಾಗಿ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಅವರ ಹಿಂದೆ ಬೊಮ್ಮಾಯಿ ಕಾಣಿಸಿಕೊಂಡಾಗ ಅವರಿಗೂ ಅದೇ ರೀತಿಯ ಸ್ವಾಗತ ಸಿಕ್ಕಿತು.
ಬೇರೆ ಬೇರೆ ಸಮುದಾಯಗಳು ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರನ್ನು ವೇದಿಕೆಯ ಮೇಲೆ ಸನ್ಮಾನಿಸಿದವು. ಗೋವಿಂದ ಕಾರಜೋಳ ಅವರು ಸನ್ಮಾನ ಮಾಡುವಾಗ ಬೊಮ್ಮಾಯಿ ಹಾರ ಹಾಕಿಸಿಕೊಳ್ಳುವುದಿಲ್ಲ. ನಿಮಗೆ ಗೊತ್ತಲ್ಲ. ಹೂವಿನ ಹಾರಗಳ ಸನ್ಮಾನ ನನಗೆ ಬೇಡ ಅಂತ ಹೇಳಿದ್ದಾರೆ. ಹಾಗಾಗಿ ಬೇಡ ಅನ್ನುತ್ತಾರೆ.
ಆಮೇಲೆ ಕುರುಬ ಸಮುದಾಯದವರು ಮುಖ್ಯಮಂತ್ರಿಗಳಿಗೆ ಸನ್ಮಾನ ಮಾಡುವಾಗ ಬೊಮ್ಮಾಯಿ ಹಾರ ಹಾಕಿಸಿಕೊಳ್ಳುತ್ತಾರೆ. ವಿರೋದ ಪಕ್ಷದ ನಾಯಕರು ಸಹ ಅದೇ ಸಮುದಾಯದವರು ಅನ್ನೋ ಕಾರಣಕ್ಕೆ ಹಾರ ಹಾಕಿಸಿಕೊಂಡರೇ? ನಮ್ಮದು ಬರೀ ಊಹೆ ಮಾರಾಯ್ರೇ. ನಿಮಗೆ ಸರಿ ಅನಿಸಿದನ್ನು ನೀವು ಅರ್ಥೈಸಿಕೊಳ್ಳಿ.
ಈ ವಿಡಿಯೋದ ಅಂತ್ಯದಲ್ಲಿ ಒಂದು ಸ್ವಾರಸ್ಯಕರ ಸಂಗತಿ ನಿಮಗೆ ಕಾಣಿಸುತ್ತದೆ. ಬೊಮ್ಮಾಯಿ ಮತ್ತು ಸಿದ್ದರಾಮಯ್ಯ ಏನನ್ನೋ ಗಹನವಾಗಿ ಚರ್ಚಿಸುತ್ತಿದ್ದಾರೆ. ಅವರಿಬ್ಬರ ಹಿಂದೆ ನಿಂತಿರುವ ಒಬ್ಬ ಅಧಿಕಾರಿ ಗಣ್ಯರಿಬ್ಬರ ಮಾತನ್ನು ತದೇಕಚಿತ್ತದಿಂದ ಕೇಳಿಸಿಕೊಳ್ಳುತ್ತಿದ್ದಾರೆ!
ಒಂದು ಸಂದರ್ಭದಲ್ಲಿ ಬೊಮ್ಮಾಯಿ ಅವರು ಸಿದ್ದರಾಮಯ್ಯವರಿಗೆ ಏನೋ ಕೇಳಿದಾಗ ಅವರು ಇಲ್ಲವೆಂದು ತಲೆಯಲ್ಲಾಡಿಸುತ್ತಾರೆ. ಕೂಡಲೇ ಮುಖ್ಯಮಂತ್ರಿಗಳು ತಮ್ಮ ಹಿಂದಿದ್ದ ಅಧಿಕಾರಿಯ ಮುಖ ಸ್ವಲ್ಪ ಕೋಪದಿಂದಲೇ ನೋಡುತ್ತಾರೆ.
ಆ ಅಧಿಕಾರಿಯ ಪ್ರತಿಕ್ರಿಯೆ ಗಮನಿಸಿ ಮಾರಾಯ್ರೇ. ಶಾಲೆಗಳಲ್ಲಿ ಮಕ್ಕಳು ಟೀಚರ್ ಗೆ ಇಲ್ಲ ಮಿಸ್ ನಾನೇನೂ ಮಾಡಿಲ್ಲ ಅನ್ನುವ ಹಾಗೆ ಅಧಿಕಾರಿ ಗೋಣು ಅಲ್ಲಾಡಿಸುತ್ತಾ ಹಿಂದೆ ಸರಿಯುತ್ತಾರೆ!!
ಇದನ್ನೂ ಓದಿ: ದಿ ನಂಜುಂಡಸ್ವಾಮಿ ಚಿಂತನೆಯ ‘ಬಾರುಕೋಲು’ ಪುಸ್ತಕ ಬಿಡುಗಡೆ ಮಾಡಿದ ಸಿದ್ದರಾಮಯ್ಯ ತನ್ನ ರಾಜಕೀಯ ಗುರು ಅವರೇ ಎಂದರು