ಸ್ಪಂದನ ವಿಜಯ್ ಸಾವು; ಒಳ್ಳೆಯವರ ಮೇಲೆ ದೇವರಿಗೆ ಅದ್ಯಾಕೆ ಅಷ್ಟು ಪ್ರೀತಿ ಅಂತ ಗೊತ್ತಾಗಲ್ಲ: ಜಯಮಾಲಾ, ಹಿರಿಯ ನಟಿ

ಅರುಣ್​ ಕುಮಾರ್​ ಬೆಳ್ಳಿ

Updated on: Aug 07, 2023 | 4:19 PM

ಸ್ಪಂದನ ಇಲ್ಲದೆ ರಾಘು ಹೇಗೆ ಬದುಕುತ್ತಾನೆ? ಅವಳಿಲ್ಲದ ಜೀವನವನ್ನು ಅವನು ನೆನಪಿಸಿಕೊಳ್ಳಲಾರ ಅಂತ ಸ್ಪಂದನ ತಾಯಿ ರೋದಿಸುತ್ತಿರುವಿದನ್ನು ಕೇಳಿಸಿಕೊಂಡಾಗ ಕರುಳು ಕಿತ್ತು ಬಂದ ಹಾಗಾಯ್ತು ಅಂತ ಜಯಮಾಲಾ ಹೇಳಿದರು.

ಬೆಂಗಳೂರು: ಸ್ಪಂದನ ನಮ್ಮ ಕುಟುಂಬದ ಭಾಗವಾಗಿದ್ದಳು, ರಾಘಣ್ಣ ಕೂಡ ನಮಗೆ ಬೇರೆಯಲ್ಲ, ನಮ್ಮ ಕಣ್ಣ ಮುಂದೆ ಬೆಳೆದ ಮಕ್ಕಳಿವು, ಗಂಡ ಹೆಂಡಿರಲ್ಲಿ ಅದೆಷ್ಟು ಅನ್ಯೋನ್ಯತೆ, ಅದೆಷ್ಟು ಪ್ರೀತಿ! ನೋಡಿದವರೆಲ್ಲ ಆದರ್ಶ ದಂಪತಿ, ಪತಿ-ಪತ್ನಿಯೆಂದರೆ ಹೀಗಿರಬೇಕು ಎನ್ನುತ್ತಿದ್ದರು ಎಂದು ಹಿರಿಯ ನಟಿ ಮತ್ತು ರಾಜಕಾರಣಿ ಜಯಮಾಲಾ (Jayamala) ಹೇಳಿದರು. ಸ್ಪಂದನ ವಿಜಯ್ (Spandana Vijay) ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಹೊರಬಂದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಗದ್ಗದಿತ ಸ್ವರದಲ್ಲಿ ಮಾತಾಡಿದ ಜಯಮಾಲಾ, ಸ್ಪಂದನ ಇಲ್ಲದೆ ರಾಘು (Vijay Raghavendra) ಹೇಗೆ ಬದುಕುತ್ತಾನೆ? ಅವಳಿಲ್ಲದ ಜೀವನವನ್ನು ಅವನು ನೆನಪಿಸಿಕೊಳ್ಳಲಾರ ಅಂತ ಸ್ಪಂದನ ತಾಯಿ ರೋದಿಸುತ್ತಿರುವಿದನ್ನು ಕೇಳಿಸಿಕೊಂಡಾಗ ಕರುಳು ಕಿತ್ತು ಬಂದ ಹಾಗಾಯ್ತು ಅಂತ ಹೇಳಿದರು. ದೇವರಿಗೆ ಯಾಕೆ ಒಳ್ಳೆಯವರ ಮೇಲೆ ಪ್ರೀತಿಯೋ ಗೊತ್ತಾಗೋದಿಲ್ಲ, ಸ್ಪಂದನಳ ಅತ್ಮಕ್ಕೆ ಶಾಂತಿ ಸಿಗಲಿ ಮತ್ತು ಅಕೆಯನ್ನು ಕಳೆದುಕೊಂಡಿರುವ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಪರಮಾತ್ಮ ನೀಡಲಿ ಎಂದು ಹಿರಿಯ ನಟಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.