[lazy-load-videos-and-sticky-control id=”IMS8uTMkNDk”]
ಬಳ್ಳಾರಿ: ಕಾಲುವೆಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧೆಯನ್ನ ಪ್ರಾಣದ ಹಂಗು ತೊರೆದು ಯುವಕನೊಬ್ಬ ಕಾಪಾಡಿರುವ ಘಟನೆ ಗಣಿನಾಡಿನಲ್ಲಿ ನಿನ್ನೆ ನಡೆದಿದೆ.
ಜಿಲ್ಲೆಯ ಹೊಸಪೇಟೆ ನಗರದ ಆರ್.ಟಿ.ಒ. ಕಚೇರಿಯ ಮುಂದೆ ಹರಿಯುವ ತುಂಗಭದ್ರ ಹೆಚ್.ಎಲ್.ಸಿ.ಕಾಲುವೆಗೆ ನಿನ್ನೆ ಸಂಜೆ 70 ವರ್ಷದ ವೃದ್ಧೆಯೊಬ್ಬರು ಮುಖ ತೊಳೆಯಲು ಕಾಲುವೆಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಕಾಲು ಜಾರಿ ಬಿದ್ದ ವೃದ್ಧೆ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈ ಸಂದರ್ಭದಲ್ಲಿದ್ದ ಅಲ್ಲೇ ನೆರೆದಿದ್ದ ಸ್ಥಳೀಯರು ವೃದ್ಧೆಯನ್ನ ಕಾಪಾಡಲು ಧೈರ್ಯ ತೋರಲಿಲ್ಲ.
ಆದರೆ, ಕಾಲುವೆಯ ಮತ್ತೊಂದು ದಡದಲ್ಲಿ ಸ್ನೇಹಿತರೊಂದಿಗೆ ಸಂಚರಿಸುತ್ತಿದ್ದ ಅಜಯ್ ಎಂಬ ಸ್ಥಳೀಯ ಯುವಕ ಸೇರಿದ್ದವರ ಚೀರಾಟ ಕೇಳಿ ಕೂಡಲೆ ಕಾಲುವೆಗೆ ಜಿಗಿದು ವೃದ್ಧೆಯನ್ನ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾನೆ. ವೃದ್ಧೆ ನೀರಿಗೆ ಬೀಳುತ್ತಿದ್ದಂತೆ ಆಕೆಯ ಉಸಿರುಗಟ್ಟಿತ್ತು. ಹೀಗಾಗಿ, ಆಕೆಯನ್ನ ನೀರಿನಿಂದ ಮೇಲೆತ್ತಿದ್ದ ಬಳಿಕ ಸ್ಥಳೀಯ ಯುವಕರು ದೇಹದಿಂದ ನೀರನ್ನ ಹೊರತೆಗೆದು ಹೋಗಬೇಕಿದ್ದ ವೃದ್ಧೆಯ ಜೀವವನ್ನ ಕಾಪಾಡಿದ್ದಾರೆ.
Published On - 3:38 pm, Sat, 22 August 20