ಕೊರೊನಾ ಮಧ್ಯೆ ಮಾನವೀಯತೆ ಮೆರೆದ ಪೋರ, ಹಸಿವಿನಿಂದ ಬಳಲಿದ್ದ ಪುಟಾಣಿಗೆ ತಿಂಡಿ ಕೊಟ್ಟ!
[lazy-load-videos-and-sticky-control id=”68jVMAmDdME”] ಬೆಂಗಳೂರು: ಸಂಕಷ್ಟದ ನಡುವೆಯೂ ಮಾನವೀಯತೆ ಮೆರೆಯೋರು ನಿಜಕ್ಕೂ ಗ್ರೇಟ್. ಅಂತೆಯೇ ಹಸಿವಿನಿಂದ ಬಳಲುತ್ತಿದ್ದ ಪುಟ್ಟ ಹುಡುಗಿಗೆ ಬಾಲಕನೊಬ್ಬ ತನ್ನ ಬಳಿ ಇರೋ ತಿಂಡಿ ಕೊಟ್ಟು ಮಾನವೀಯತೆ ಮೆರೆದಿರೋ ಘಟನೆ ನೆಲಮಂಗಲದ ಟೋಲ್ ಬಳಿ ನಡೆದಿದೆ. ಎಲ್ಲರಂತೆ ತನ್ನ ಊರಿನತ್ತ ತೆರಳುತ್ತಿದ್ದ 16 ವರ್ಷದ ಪವನ್, ಟೋಲ್ ಬಳಿ ಬಸ್ಗಾಗಿ ಕಾಯುತ್ತಿದ್ದ ತಾಯಿ-ಮಗಳು ಜೋಡಿಯನ್ನು ಕಂಡಿದ್ದಾನೆ. ಹಸಿವು ಮತ್ತು ಹುಷಾರಿಲ್ಲದೆ ಬಳಲುತ್ತಿದ್ದ ಪುಟ್ಟ ಹುಡುಗಿ ಅಳುತ್ತಿದ್ದನ್ನು ಕಂಡು ಪವನ್ಗೆ ಕರುಳು ಚುರುಕ್ ಅಂದಿದೆ. ಹಾಗಾಗಿ, ತನ್ನ […]
[lazy-load-videos-and-sticky-control id=”68jVMAmDdME”]
ಬೆಂಗಳೂರು: ಸಂಕಷ್ಟದ ನಡುವೆಯೂ ಮಾನವೀಯತೆ ಮೆರೆಯೋರು ನಿಜಕ್ಕೂ ಗ್ರೇಟ್. ಅಂತೆಯೇ ಹಸಿವಿನಿಂದ ಬಳಲುತ್ತಿದ್ದ ಪುಟ್ಟ ಹುಡುಗಿಗೆ ಬಾಲಕನೊಬ್ಬ ತನ್ನ ಬಳಿ ಇರೋ ತಿಂಡಿ ಕೊಟ್ಟು ಮಾನವೀಯತೆ ಮೆರೆದಿರೋ ಘಟನೆ ನೆಲಮಂಗಲದ ಟೋಲ್ ಬಳಿ ನಡೆದಿದೆ.
ಎಲ್ಲರಂತೆ ತನ್ನ ಊರಿನತ್ತ ತೆರಳುತ್ತಿದ್ದ 16 ವರ್ಷದ ಪವನ್, ಟೋಲ್ ಬಳಿ ಬಸ್ಗಾಗಿ ಕಾಯುತ್ತಿದ್ದ ತಾಯಿ-ಮಗಳು ಜೋಡಿಯನ್ನು ಕಂಡಿದ್ದಾನೆ. ಹಸಿವು ಮತ್ತು ಹುಷಾರಿಲ್ಲದೆ ಬಳಲುತ್ತಿದ್ದ ಪುಟ್ಟ ಹುಡುಗಿ ಅಳುತ್ತಿದ್ದನ್ನು ಕಂಡು ಪವನ್ಗೆ ಕರುಳು ಚುರುಕ್ ಅಂದಿದೆ. ಹಾಗಾಗಿ, ತನ್ನ ಬ್ಯಾಗ್ನಲ್ಲಿದ್ದ ತಿಂಡಿ ಪ್ಯಾಕೆಟ್ ಮತ್ತು ಜ್ಯೂಸ್ ಬಾಟಲ್ ನೀಡಿ ಮಗುವಿನ ಹಸಿವು ನೀಗಿಸಿದ್ದಾನೆ. ಈ ಮೂಲಕ ಸಂಕಷ್ಟದಲ್ಲೂ ಇತರರಿಗೆ ನೆರವಾಗಲು ಮುಂದಾಗಿದ್ದಾನೆ.
Published On - 12:53 pm, Mon, 13 July 20