ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ,ಬಿಹಾರದಲ್ಲಿ ವಿದ್ಯಾರ್ಥಿಗಳು, ಪೊಲೀಸರ ನಡುವೆ ಜಟಾಪಟಿ
ಬಿಹಾರ ನಾಗರಿಕ ಸೇವಾ ಪರೀಕ್ಷೆ (BPSC) ರದ್ದುಗೊಳಿಸುವುದು ಹಾಗೂ ಶಿಕ್ಷಕರ ನೇಮಕಾತಿ ಪರೀಕ್ಷೆ ಸುಧಾರಣೆಗೆ ಆಗ್ರಹಿಸಿ ಪಾಟ್ನಾದಲ್ಲಿ ಗಾಂಧಿ ಮೈದಾನದಿಂದ ರಾಜಭವನ ಹಾಗೂ ಸಿಎಂ ನಿವಾಸಕ್ಕೆ ಮೆರವಣಿಗೆ ಹೊರಟ ನೂರಾರು ಆಕಾಂಕ್ಷಿಗಳನ್ನು ಪೊಲೀಸರು ಜಲಫಿರಂಗಿ ಬಳಸಿ ತಡೆದಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ನಿಯಂತ್ರಣ ಮತ್ತು ನೇಮಕಾತಿ ಪರೀಕ್ಷಾ ಕ್ಯಾಲೆಂಡರ್ ಜಾರಿಗೆ ಒತ್ತಾಯಿಸಿ ವಿದ್ಯಾರ್ಥಿಗಳು ಬ್ಯಾರಿಕೇಡ್‌ಗಳನ್ನು ಭೇದಿಸಿದಾಗ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.
ಪಾಟ್ನಾ, ಆಗಸ್ಟ್ 25: ಬಿಹಾರ ನಾಗರಿಕ ಸೇವಾ ಪರೀಕ್ಷೆ (BPSC) ರದ್ದುಗೊಳಿಸುವುದು ಹಾಗೂ ಶಿಕ್ಷಕರ ನೇಮಕಾತಿ ಪರೀಕ್ಷೆ ಸುಧಾರಣೆಗೆ ಆಗ್ರಹಿಸಿ ಪಾಟ್ನಾದಲ್ಲಿ ಗಾಂಧಿ ಮೈದಾನದಿಂದ ರಾಜಭವನ ಹಾಗೂ ಸಿಎಂ ನಿವಾಸಕ್ಕೆ ಮೆರವಣಿಗೆ ಹೊರಟ ನೂರಾರು ಆಕಾಂಕ್ಷಿಗಳನ್ನು ಪೊಲೀಸರು ತಡೆದಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ನಿಯಂತ್ರಣ ಮತ್ತು ನೇಮಕಾತಿ ಪರೀಕ್ಷಾ ಕ್ಯಾಲೆಂಡರ್ ಜಾರಿಗೆ ಒತ್ತಾಯಿಸಿ ವಿದ್ಯಾರ್ಥಿಗಳು ಬ್ಯಾರಿಕೇಡ್‌ಗಳನ್ನು ಭೇದಿಸಿದಾಗ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.
TRE 4.0 ಪರೀಕ್ಷೆಯನ್ನು ಒಂದೇ ಹಂತದಲ್ಲಿ ನಡೆಸುವುದು, ನೆಗೆಟಿವ್ ಅಂಕಗಳನ್ನು ತೆಗೆದುಹಾಕುವುದು ಹಾಗೂ ವರ್ಷಗಳಿಂದ ಬಾಕಿ ಉಳಿದಿರುವ BSSC ಪರೀಕ್ಷೆಗಳನ್ನು ಶೀಘ್ರ ಪೂರ್ಣಗೊಳಿಸುವುದು.
ವಿಪಕ್ಷ ನಾಯಕ ತೇಜಸ್ವಿ ಯಾದವ್ ಪತ್ರದ ಬೆನ್ನಲ್ಲೇ, ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ತಿಂಗಳ 4ನೇ ಮಂಗಳವಾರ ‘ವಿದ್ಯಾರ್ಥಿ ಸಹಯೋಗ್ ಶಿಬಿರ’ ಹಾಗೂ 1,100 ಸಹಾಯವಾಣಿ ಆರಂಭಿಸುವುದಾಗಿ ಸರ್ಕಾರ ಪ್ರಕಟಿಸಿದೆ.
ಬಿಹಾರದಲ್ಲಿ ಪದೇ ಪದೇ ನಡೆಯುವ ಪೇಪರ್ ಲೀಕ್ ಪ್ರಕರಣಗಳ ವಿರುದ್ಧ ತನಿಖೆ ತೀವ್ರಗೊಳಿಸಲು ಹಾಗೂ ನೇಮಕಾತಿ ಪಾರದರ್ಶಕತೆ ಕಾಪಾಡಲು ಕಠಿಣ ಪರೀಕ್ಷಾ ವಿರೋಧಿ ಅಕ್ರಮ ಕಾಯ್ದೆಯಡಿ ಕ್ರಮಕ್ಕೆ ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿವೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ