Brahmanda Guruji: ‘ಮುಂಡಾ ಮುಚ್ತು..’ ಎನ್ನುತ್ತಲೇ ಬಿಗ್ ಬಾಸ್ ಮನೆಗೆ ಕಾಲಿಟ್ಟ ಬ್ರಹ್ಮಾಂಡ ಗುರೂಜಿ; ಎಲ್ಲರಿಗೂ ಅಚ್ಚರಿ
‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋಗೆ ಬ್ರಹ್ಮಾಂಡ ಗುರೂಜಿ ಬಂದಿರುವುದು ಇದೇ ಮೊದಲೇನೂ ಇಲ್ಲ. ಮೊದಲ ಸೀಸನ್ನಲ್ಲಿಯೇ ಅವರು ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದರು. ಮೂರನೇ ರನ್ನರ್ಅಪ್ ಆಗಿ ಅವರು ಹೊರಹೊಮ್ಮಿದ್ದರು. ಈಗ ಅವರು ಮತ್ತೆ ದೊಡ್ಮನೆಗೆ ಎಂಟ್ರಿ ನೀಡಿರುವುದು ಹೊಸ ಟ್ವಿಸ್ಟ್ ಸಿಕ್ಕಂತೆ ಆಗಿದೆ.
ಈ ಬಾರಿಯ ಬಿಗ್ ಬಾಸ್ (BBK 10) ಮನೆಗೆ ಅನೇಕರು ಗೆಸ್ಟ್ ಆಗಿ ಬರುತ್ತಿದ್ದಾರೆ. ಬ್ರಹ್ಮಾಂಡ ಗುರೂಜಿ (Brahmanda Guruji) ಎಂದೇ ಫೇಮಸ್ ಆಗಿರುವ ನರೇಂದ್ರ ಬಾಬು ಶರ್ಮಾ ಅವರು ಈಗ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಅವರು ಕಾಲಿಟ್ಟಿದ್ದು ಎಲ್ಲರಿಗೂ ಅಚ್ಚರಿ ಆಗಿದೆ. ‘ಬ್ರಹ್ಮಾಂಡ ಗುರೂಜಿ ಯಾಕೆ ಬಂದಿರಬಹುದು’ ಎಂದು ತನಿಶಾ ಕುಪ್ಪಂಡ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ’ (Bigg Boss Kannada) ರಿಯಾಲಿಟಿ ಶೋಗೆ ಬ್ರಹ್ಮಾಂಡ ಗುರೂಜಿ ಬಂದಿರುವುದು ಇದೇ ಮೊದಲೇನೂ ಇಲ್ಲ. ಮೊದಲ ಸೀಸನ್ನಲ್ಲಿಯೇ ಅವರು ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದರು. ಮೂರನೇ ರನ್ನರ್ಅಪ್ ಆಗಿ ಅವರು ಹೊರಹೊಮ್ಮಿದ್ದರು. ಈಗ ಅವರು ಮತ್ತೆ ದೊಡ್ಮನೆಗೆ ಎಂಟ್ರಿ ನೀಡಿರುವುದು ಹೊಸ ಟ್ವಿಸ್ಟ್ ಸಿಕ್ಕಂತೆ ಆಗಿದೆ. ಇದರ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಅದರಲ್ಲಿ ‘ಮುಂಡಾಮುಚ್ತು’ ಎಂಬ ಅವರ ಫೇಮಸ್ ಡೈಲಾಗ್ ಕೂಡ ಕೇಳಿಸಿದೆ. ಉಚಿತವಾಗಿ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ದಿನದ 24 ಗಂಟೆ ಲೈವ್ ನೋಡಲು ಅವಕಾಶ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.