ಮಾಂಗಲ್ಯಧಾರಣೆಯಾದ ಕೂಡಲೇ ಪರೀಕ್ಷಾ ಕೇಂದ್ರಕ್ಕೆ ಧಾವಿಸಿ ಬಿಕಾಂ ಅಂತಿಮ ವರ್ಷದ ಪರೀಕ್ಷೆ ಬರೆದ ವಧು
ಹಾಸನ ನಗರದಲ್ಲಿ ಚನ್ನಪಟ್ಟಣ ಬಡಾವಣೆ ನಿವಾಸಿಯಾಗಿರುವ ಕುಮಾರ್ ಮತ್ತು ಅನುಸೂಯ ದಂಪತಿಯ ಮಗಳಾಗಿರುವ ಕವನರ ಮದುವೆ ಹಾಸನ ಗುಡ್ಡೇನಳ್ಳಿ ನಿವಾಸಿ ದಿನೇಶ್ ಜೊತೆ ಇಂದು ಬೆಳಗ್ಗೆ ಜರುಗಿದೆ. ಪರೀಕ್ಷಾ ಕೇಂದ್ರದಲ್ಲಿ ಕುಳಿತು ಉತ್ತರ ಪತ್ರಿಕೆಯಲ್ಲಿ ಬರೆಯುತ್ತಿರುವ ಕವನ ಮುಖದದಲ್ಲಿ ದುಗುಡ ಕಾಣುತ್ತಿದೆಯಾದರೂ ಅವರು ಆತ್ಮವಿಶ್ವಾಸದ ಪ್ರತೀಕವಾಗಿದ್ದಾರೆ.
ಹಾಸನ, ಮೇ 22: ಶಿಕ್ಷಣದೆಡೆ ಬದ್ಧತೆ ಅಂದರೆ ಇದೇ ಇರಬೇಕು. ದೃಶ್ಯಗಳಲ್ಲಿ ಕಾಣುತ್ತಿರುವ ಯುವತಿಯ ಹೆಸರು ಕವನ, ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ. ಮನೆಯ ಹಿರಿಯರು ಇವತ್ತು ಮದುವೆ ನಿಗದಿ ಮಾಡಿದ್ದಾರೆ. ಕವನ ಪೋಷಕರ ನಿರ್ಧಾರವನ್ನು ಪ್ರಶ್ನಿಸದೆ ಮದುವೆ ಶಾಸ್ತ್ರಗಳು ಮತ್ತು ಮಾಂಗಲ್ಯಧಾರಣೆ ಮುಗಿಸಿಕೊಂಡು ವಧುವಿನ ಉಡುಗೆಯಲ್ಲೇ ಪರೀಕ್ಷಾ ಕೇಂದ್ರಕ್ಕೆ ಬಂದು ಇನ್ಕಂ ಟ್ಯಾಕ್ಸ್ ಪರೀಕ್ಷೆ ಬರೆದಿದ್ದಾರೆ. ಅಣ್ಣ ಕಾರ್ತೀಕ್ ತಂಗಿಯನ್ನು ಹಾಸನದ ಪ್ತೈಡ್ ಕಾಲೇಜಿಗೆ ಕರೆತಂದಿದ್ದಾರೆ. ಪರೀಕ್ಷೆ ಬರೆಯಲೇಬೇಕೆಂಬ ಅವರ ಒತ್ತಾಸೆಗೆ ಪೋಷಕರಾಗಲೀ ಪತಿಯ ಮನೆಯವರಾಗಲೀ ಅಡ್ಡಿ ಮಾಡಿಲ್ಲ.
ಇದನ್ನೂ ಓದಿ: JEE Advanced Exam 2025: ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಯನ್ನು ವಿಶ್ವದ ಎರಡನೇ ಕಠಿಣ ಪರೀಕ್ಷೆ ಎಂದು ಪರಿಗಣಿಸುವುದು ಏಕೆ?
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ