Video: ತಾಂತ್ರಿಕ ದೋಷದಿಂದಾಗಿ ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಫೈಟರ್ ಜೆಟ್ ಯುಕೆಗೆ ವಾಪಸ್

Updated on: Jul 22, 2025 | 11:41 AM

ತಾಂತ್ರಿಕ ದೋಷದಿಂದಾಗಿ ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಎಫ್ -35 ಫೈಟರ್ ಜೆಟ್ ಯುಕೆಗೆ ಮರಳಿದೆ. ಕಳೆದ ಮೂರ್ನಾಲ್ಕು ವಾರಗಳಿಂದ ಈ ಯುದ್ಧ ವಿಮಾನ ಕೇರಳದಲ್ಲೇ ಇತ್ತು. ಬಳಿಕ ಬ್ರಿಟಿಷ್ ತಂತ್ರಜ್ಞರ ತಂಡ ಆಗಮಿಸಿ ದೋಷವನ್ನು ಪತ್ತೆ ಹಚ್ಚುವ ಕೆಲಸ ಮಾಡಿತ್ತು.ಈ ಎಫ್-35ಬಿ ಫೈಟರ್ ಜೆಟ್ ಸುಮಾರು 110 ಕೋಟಿ ರೂ. ಗಳಿಗಿಂತಲೂ ಹೆಚ್ಚು ದುಬಾರಿಯದ್ದಾಗಿದೆ. ಎಚ್ ಎಂಎಸ್ ಪ್ರಿನ್ಸ್ ಆಫ್ ವೇಲ್ಸ್‌ನ ಎಂಜಿನಿಯರ್‌ಗಳು ಇದರ ಪರಿಸ್ಥಿತಿಯನ್ನು ನೋಡಿ ಯುಕೆಯಿಂದ ಹೆಚ್ಚುವರಿ ತಾಂತ್ರಿಕ ಪರಿಣತಿ ಮತ್ತು ಉಪಕರಣಗಳು ಅಗತ್ಯವಿದೆ ಎಂದು ನಿರ್ಧರಿಸಿದ್ದರು.

ತಿರುವನಂದಪುರಂ, ಜುಲೈ 22: ತಾಂತ್ರಿಕ ದೋಷದಿಂದಾಗಿ ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಎಫ್ -35 ಫೈಟರ್ ಜೆಟ್ ಯುಕೆಗೆ ಮರಳಿದೆ. ಕಳೆದ ಮೂರ್ನಾಲ್ಕು ವಾರಗಳಿಂದ ಈ ಯುದ್ಧ ವಿಮಾನ ಕೇರಳದಲ್ಲೇ ಇತ್ತು. ಬಳಿಕ ಬ್ರಿಟಿಷ್ ತಂತ್ರಜ್ಞರ ತಂಡ ಆಗಮಿಸಿ ದೋಷವನ್ನು ಪತ್ತೆ ಹಚ್ಚುವ ಕೆಲಸ ಮಾಡಿತ್ತು.ಈ ಎಫ್-35ಬಿ ಫೈಟರ್ ಜೆಟ್ ಸುಮಾರು 110 ಕೋಟಿ ರೂ. ಗಳಿಗಿಂತಲೂ ಹೆಚ್ಚು ದುಬಾರಿಯದ್ದಾಗಿದೆ. ಎಚ್ ಎಂಎಸ್ ಪ್ರಿನ್ಸ್ ಆಫ್ ವೇಲ್ಸ್‌ನ ಎಂಜಿನಿಯರ್‌ಗಳು ಇದರ ಪರಿಸ್ಥಿತಿಯನ್ನು ನೋಡಿ ಯುಕೆಯಿಂದ ಹೆಚ್ಚುವರಿ ತಾಂತ್ರಿಕ ಪರಿಣತಿ ಮತ್ತು ಉಪಕರಣಗಳು ಅಗತ್ಯವಿದೆ ಎಂದು ನಿರ್ಧರಿಸಿದ್ದರು. ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಈ ಸ್ಟೆಲ್ತ್ ಫೈಟರ್ ಜೆಟ್ ನ ಸ್ಥಿತಿಗತಿಯ ಬಗ್ಗೆ ಬ್ರಿಟಿಷ್ ಮಿಲಿಟರಿ ಸೂಕ್ಷ್ಮವಾಗಿ ಗಮನಿಸಿತ್ತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jul 22, 2025 11:41 AM