ಸರ್ಕಾರೀ ಮತ್ತು ಪಕ್ಷದ ಕಾರ್ಯಗಳ ನಿಮಿತ್ತ ಸಿಎಂ ಮತ್ತು ಡಿಸಿಎಂ ದೆಹಲಿಗೆ ಹೋಗಲಿದ್ದಾರೆ: ಡಿಕೆ ಸುರೇಶ್
ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಹೊಸ ವಿಚಾರನೇನಲ್ಲ, ಮೊದ್ಲಿಂದ್ಲೂ ಎರಡು ಬಣಗಳಿವೆ ಮತ್ತು ಅವು ಯಾವೆಂದು ಕನ್ನಡಿಗರಿಗೆ ಗೊತ್ತು. ಶನಿವಾರದಂದು ಸಿದ್ದರಾಮಯ್ಯನವರು ಮೈಸೂರಲ್ಲಿ ಸಾಧನಾ ಸಮಾವೇಶ ನಡೆಸುವ ಅವಶ್ಯಕತೆಯಿತ್ತೇ ಅಂತ ಅವರ ಪಕ್ಷದವರೇ ಕೇಳುತ್ತಿದ್ದಾರೆ. ಅಲ್ಲದೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ಶಿವಕುಮಾರ್ ಹೆಸನ್ನು ಸಲ್ಯೂಟೇಷನ್ನಲ್ಲಿ ಹೇಳದಿರುವುದು ಕೆಟ್ಟ ಸಂದೇಶ ರವಾನಿಸಿದೆ.
ಬೆಂಗಳೂರು, ಜುಲೈ 22: ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಮಾಜಿ ಸಂಸದ ಡಿಕೆ ಸುರೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಸರ್ಕಾರೀ ಮತ್ತು ಪಕ್ಷದ ಕೆಲಸಗಳ ನಿಮಿತ್ತ ದೆಹಲಿಗೆ ಹೋಗಲಿದ್ದಾರೆ, ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು. ಸಂಸತ್ ಅಧಿವೇಶನ ನಡಯುತ್ತಿದೆ, ಸಿಎಂಗೆ ಮತ್ತು ಡಿಸಿಎಂಗೆ ಸಂಸದರೊಂದಿಗೆ ಮತ್ತು ಕೇಂದ್ರದ ಸಚಿವರೊಂದಿಗೆ ಚರ್ಚೆ ಮಾಡೋದಿರುತ್ತದೆ, ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಿರುವ ಅನುದಾನಗಳ ಬಗ್ಗೆ ಮಾತಾಡುವುದಿರುತ್ತದೆ, ಪಕ್ಷ ಸಂಘಟನೆ ವಿಷಯದಲ್ಲಿ ವರಿಷ್ಠರ ಜೊತೆ ಮಾತುಕತೆ ನಡೆಸುವ ಕೆಲಸವಿರುತ್ತದೆ ಎಂದು ಹೇಳಿದ ಸುರೇಶ್, ಶಿವಕುಮಾರ್ ಅವರು ದೆಹಲಿಗೆ ಹೋಗುತ್ತಿರುವುದು ಹೊಸದೇನಲ್ಲ ಎಂದರು.
ಇದನ್ನೂ ಓದಿ: ಐಶ್ವರ್ಯ ಗೌಡ ವಂಚನೆ ಪ್ರಕರಣ ಮತ್ತು ಡಿಕೆ ಸುರೇಶ್ ನಡುವೆ ಯಾವುದೇ ಸಂಬಂಧವಿಲ್ಲ: ಡಿಕೆ ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ