Karnataka Assembly Polls; ಹಾಸನ ಜಿಲ್ಲೆಯಲ್ಲಿ ಪ್ರಚಾರಕ್ಕಾಗಿ ಕಡುಗೆಂಪು ವರ್ಣದ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಬಿಎಸ್ ಯಡಿಯೂರಪ್ಪ
ಹೆಲಿಪ್ಯಾಡ್ ನಲ್ಲಿ ಚಾಪರ್ ಲ್ಯಾಂಡ್ ಆಗಿ ಯಡಿಯೂರಪ್ಪ ಕೆಳಗಿಳಿದ ಬಳಿಕ ಅವರಿಗಾಗಿ ಕಾಯುತ್ತಿದ್ದ ಕಾರ್ಯಕರ್ತರು ಹಾರ ಹಾಕಿ ಶಾಲು ಹೊದೆಸಿ ಗೌರವಿಸಿದರು.
ಹಾಸನ: ನಿನ್ನೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ದೇವೇಗೌಡ (HD Devegowda) ಹಾಸನಕ್ಕೆ ಹೆಲಿಕಾಪ್ಟರ್ ನಲ್ಲಿ (helicopter) ಆಗಮಿಸಿ 90ರ ಇಳಿವಯಸ್ಸಿನಲ್ಲೂ ಜೆಡಿಎಸ್ ಅಭ್ಯರ್ಥಿಗಳ ಪರ ಜೋರು ಪ್ರಚಾರ ನಡೆಸಿದ್ದರು. ಅವರು ಬಿಳಿ ಬಣ್ಣದ ಚಾಪರ್ ನಲ್ಲಿ ಬಂದಿದ್ದರೆ ಇಂದು ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಕಡುಗೆಂಪು ವರ್ಣದ ಹೆಲಿಕಾಪ್ಟರ್ ನಲ್ಲಿ ಹಾಸನಕ್ಕೆ ಬಂದರು. ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳ ಪರ ಯಡಿಯೂರಪ್ಪ ಪ್ರಚಾರ ನಡೆಸಲಿದ್ದಾರೆ. ಹೆಲಿಪ್ಯಾಡ್ ನಲ್ಲಿ ಚಾಪರ್ ಲ್ಯಾಂಡ್ ಆಗಿ ಯಡಿಯೂರಪ್ಪ ಕೆಳಗಿಳಿದ ಬಳಿಕ ಅವರಿಗಾಗಿ ಕಾಯುತ್ತಿದ್ದ ಕಾರ್ಯಕರ್ತರು ಹಾರ ಹಾಕಿ ಶಾಲು ಹೊದೆಸಿ ಗೌರವಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ