ಚಿತ್ರದುರ್ಗದಲ್ಲಿ ಜನರ ರಾಜಾಹುಲಿ ಘೋಷಣೆ ನಡುವೆ ಕಾರು ಪಂಕ್ಚರ್, ಬೇರೆ ಕಾರಲ್ಲಿ ಪಯಣಿಸಿದ ಯಡಿಯೂರಪ್ಪ

|

Updated on: Apr 16, 2024 | 6:18 PM

ಅವರು ಅಲ್ಲಿಂದ ತೆರಳುವಾಗಲೂ, ಅವರ ಕಾರನ್ನು ಮುಕ್ಕುರಿದ ಜನ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ ಮಾಡಿದರು. ಪೊಲೀಸರು ಕಾರಿನ ಹತ್ತಿರ ಬಾರದಂತೆ ತಡೆಯುತ್ತಿದ್ದರೂ ಜನ ನುಗ್ಗಿಬಂದರು. ಆಗಲೂ ಅವರ ಬಾಯಲ್ಲಿ ರಾಜಾ ಹುಲಿ ಘೋಷಣೆ! ಆದರೆ, ಯಡಿಯೂರಪ್ಪ ಪ್ರಯಾಣಿಸಬೇಕಿದ್ದ ಕಾರು ಪಂಕ್ಚರ್ ಆಗಿದ್ದ ಕಾರಣ ಅವರು ತಮ್ಮ ಕಾರಿಂದ ಇಳಿದು ಬೇರೆ ಕಾರಲ್ಲಿ ಅಲ್ಲಿಂದ ತೆರಳಬೇಕಾಯಿತು.

ಚಿತ್ರದುರ್ಗ: ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪನವರ (BS Yediyurappa) ಜನಪ್ರಿಯತೆ ಮತ್ತು ವರ್ಚಸ್ಸು ಕಡಿಮೆ ಆಗಿದೆ ಅನ್ನುವವರು ಈ ವಿಡಿಯೋ ನೋಡಬೇಕು ಮಾರಾಯ್ರೇ. ವಿಧಾನಸಭಾ ಚುನಾವಣೆ (Assembly polls) ನಡೆಯುತ್ತಿದ್ದಾಗ ನಮಗೆ ಕಂಡಿದ್ದ ಯಡಿಯೂರಪ್ಪ ಮತ್ತ್ತು ಲೋಕಸಭಾ ಚುನಾವಣೆ (Lok Sabha polls ) ನಡೆಯುತ್ತಿರುವ ಸಮಯದಲ್ಲಿ ಕಾಣುತ್ತಿರುವ ಯಡಿಯೂರಪ್ಪ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಆಗ ಅವರ ಮುಖದಲ್ಲಿ ಅನ್ಯಮನಸ್ಕತೆ ಕಾಣುತ್ತಿದ್ದರೆ ಈಗ ಆತ್ಮವಿಶ್ವಾಸ! ರಾಜಕೀಯದ ತಿರುವುಗಳೇ ಹಾಗೆ ಮಾರಾಯ್ರೇ. ಚಿತ್ರದುರ್ಗಕ್ಕೆ ಅವರು ಇಂದು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಚುನಾವಣಾ ಪ್ರಚಾರಕ್ಕೆ ಅಗಮಿಸಿದಾಗ ಜನ ರಾಜಾ ಹುಲಿ ಎಂದು ಕೂಗುತ್ತಾ ಸ್ವಾಗತಿಸಿದರು. ಅವರು ಅಲ್ಲಿಂದ ತೆರಳುವಾಗಲೂ, ಅವರ ಕಾರನ್ನು ಮುಕ್ಕುರಿದ ಜನ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ ಮಾಡಿದರು. ಪೊಲೀಸರು ಕಾರಿನ ಹತ್ತಿರ ಬಾರದಂತೆ ತಡೆಯುತ್ತಿದ್ದರೂ ಜನ ನುಗ್ಗಿಬಂದರು. ಆಗಲೂ ಅವರ ಬಾಯಲ್ಲಿ ರಾಜಾ ಹುಲಿ ಘೋಷಣೆ! ಆದರೆ, ಯಡಿಯೂರಪ್ಪ ಪ್ರಯಾಣಿಸಬೇಕಿದ್ದ ಕಾರು ಪಂಕ್ಚರ್ ಆಗಿದ್ದ ಕಾರಣ ಅವರು ತಮ್ಮ ಕಾರಿಂದ ಇಳಿದು ಬೇರೆ ಕಾರಲ್ಲಿ ಅಲ್ಲಿಂದ ತೆರಳಬೇಕಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಂಬರುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯಲಿದೆ: ಬಿಎಸ್ ಯಡಿಯೂರಪ್ಪ