Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಸರ್ಕಾರ ಪುರುಷ ಹಿರಿಯ ನಾಗರಿಕರಿಗೂ ಉಚಿತ ಬಸ್ ಪ್ರಯಾಣ ಸೇವೆ ಕಲ್ಪಿಸಬಹುದು: ಬಸವರಾಜ ರಾಯರೆಡ್ಡಿ

ಸಿದ್ದರಾಮಯ್ಯ ಸರ್ಕಾರ ಪುರುಷ ಹಿರಿಯ ನಾಗರಿಕರಿಗೂ ಉಚಿತ ಬಸ್ ಪ್ರಯಾಣ ಸೇವೆ ಕಲ್ಪಿಸಬಹುದು: ಬಸವರಾಜ ರಾಯರೆಡ್ಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 16, 2024 | 5:39 PM

ಮುಖ್ಯಮಂತ್ರಿ ಸಿದ್ದರಾಮಯ್ಯ, ಆಪಾರ ರಾಜಕೀಯ ಅನುಭವ ಇರುವ ರಾಯರೆಡ್ಡಿ ಅವರನ್ನು ತಮ್ಮ ಆರ್ಥಿಕ ಸಲಹೆಗಾರನಾಗಿ ನೇಮಕ ಮಾಡಿಕೊಂಡಿರುವುದು ಕನ್ನಡಿಗರಿಗೆ ಗೊತ್ತಿಲ್ಲದೇನಿಲ್ಲ. ಆದರೆ, ಪುರಷ ಹಿರಿಯ ನಾಗರಿಕರಿಗೂ ಸಿದ್ದರಾಮಯ್ಯ ಸರ್ಕಾರ ಉಚಿತ ಬಸ್ ಪ್ರಯಾಣದ ಸೇವೆ ಒದಗಿಸಿದರೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೊಳಗಾಗಬೇಕಾಗುತ್ತದೆ.

ಕೊಪ್ಪಳ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ರಾಜಶೆಖರ್ ಹಿಟ್ನಾಳ್ (Raj Shekhar Hitnal) ನಾಮಪತ್ರ ಸಲ್ಲಿಸಿದ ಬಳಿಕ ಚುನಾವಣಾ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy) ಅವರು ಒಂದು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ (Siddaramaiah government) 65 ಕ್ಕಿಂತ ಹೆಚ್ಚು ವಯೋಮಾನದ ಗಂಡಸರಿಗೂ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಬಹುದೆಂದು ಹೇಳಿದರು. ಮುಂದುವರಿದು ಮಾತಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೃದಯ ದೊಡ್ಡದು, ಅವರು ಸದಾ ಬಡವರಿಗೆ, ರೈತರಿಗೆ ಮತ್ತು ಮಹಿಳೆಯರಿಗೆ ಒಳಿತು ಮಾಡುವುದನ್ನು ಯೋಚಿಸುತ್ತಿರುತ್ತಾರೆ, ಹಾಗಾಗಿ ಅವರು ಹಿರಿಯ ಪುರುಷ ನಾಗರಿಕರಿಗೆ ಬಸ್ ಪ್ರಯಾಣ ಸೌಕರ್ಯ ಕಲ್ಪಿಸಿದರೆ ಆಶ್ಚರ್ಯ ಪಡಬೇಕಿಲ್ಲ ಎಂದು ರಾಯರೆಡ್ಡಿ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಆಪಾರ ರಾಜಕೀಯ ಅನುಭವ ಇರುವ ರಾಯರೆಡ್ಡಿ ಅವರನ್ನು ತಮ್ಮ ಆರ್ಥಿಕ ಸಲಹೆಗಾರನಾಗಿ ನೇಮಕ ಮಾಡಿಕೊಂಡಿರುವುದು ಕನ್ನಡಿಗರಿಗೆ ಗೊತ್ತಿಲ್ಲದೇನಿಲ್ಲ. ಆದರೆ, ಪುರಷ ಹಿರಿಯ ನಾಗರಿಕರಿಗೂ ಸಿದ್ದರಾಮಯ್ಯ ಸರ್ಕಾರ ಉಚಿತ ಬಸ್ ಪ್ರಯಾಣದ ಸೇವೆ ಒದಗಿಸಿದರೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೊಳಗಾಗಬೇಕಾಗುತ್ತದೆ. ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲವೆಂದು ಬಿಜೆಪಿ ಮತ್ತು ಜೆಡಿಎಸ್ ಶಾಸಕರನ್ನು ಟೀಕಿಸುವುದು ಕನ್ನಡಿಗರು ಪ್ರತಿದಿನ ಕೇಳಿಸಿಕೊಳ್ಳುತ್ತಿದ್ದಾರೆ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಚುನಾವಣೆ ಫಲಿತಾಂಶ ಬಂದಾಗ ಸಿದ್ದರಾಮಯ್ಯಗೆ ಯಾರು ಗೋ ಬ್ಯಾಕ್ ಯಾರು ಕಂ ಬ್ಯಾಕ್ ಅನ್ನೋದು ಗೊತ್ತಾಗಲಿದೆ: ಬಿಎಸ್ ಯಡಿಯೂರಪ್ಪ