ಬೀದರ್ ಜಿಲ್ಲೆಯ ಲಿಂಗಾಯತ ಮಠಾಧೀಶರೊಂದಿಗೆ ಸಭೆ ನಡೆಸಿ ಖೂಬಾಗೆ ನೆರವಾಗಲು ಮನವಿ ಮಾಡಿದ ಯಡಿಯೂರಪ್ಪ

|

Updated on: Apr 25, 2024 | 7:22 PM

ಉತ್ತರ ಕರ್ನಾಟಕದಲ್ಲಿ ಅತಿಹೆಚ್ಚು ಲಿಂಗಾಯತ ಮಠಮಾನ್ಯಗಳಿವೆ ಮತ್ತು ಚುನಾವಣೆಗಳ ಸಂದರ್ಭದಲ್ಲಿ ಅವು ನಿರ್ಣಾಯಕ ಅಂತ ಹೇಳಲಾಗದಿದ್ದರೂ ಮಹತ್ತರ ಪಾತ್ರ ನಿರ್ವಹಿಸುತ್ತವೆ. ಮಠಾಧೀಶರು ಹೇಳುವ ಮಾತನ್ನು ಮಠಗಳಿಗೆ ನಡೆದುಕೊಳ್ಳುವ ಜನ ಚಾಚೂತಪ್ಪದೆ ಪಾಲಿಸುತ್ತಾರೆ. ಇದು ಚತುರ ಮತ್ತು ಹಿರಿಯ ರಾಜಕಾರಣಿ ಯಡಿಯೂರಪ್ಪನವರಿಗೆ ಚೆನ್ನಾಗಿ ಗೊತ್ತು.

ಬೀದರ್: ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪನವರ (BS Yediyurappa) ವೈಶಿಷ್ಟ್ಯತೆಯೇ ಅದು ಮಾರಾಯ್ರೇ. ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಹೇಗೆ ಗೆಲ್ಲಿಸಬೇಕು ಅನ್ನೋದು ಚೆನ್ನಾಗಿ ಗೊತ್ತಿದೆ. ಬೀದರ್ ನಲ್ಲಿ (Bidar) ಇವತ್ತು ನಡೆದ ವಿದ್ಯಮಾನಗಳನ್ನು ನೋಡಿ. ಪಕ್ಷದ ಅಭ್ಯರ್ಥಿ ಭಗವಂತ ಖೂಬಾ (Bhagwant Khuba) ಪರ ಇವತ್ತು ಮತ ಯಾಚಿಸಲು ಬೀದರ್ ಗೆ ಆಗಮಿಸಿದ್ದ ಯಡಿಯೂರಪ್ಪ ಜಿಲ್ಲಯಲ್ಲಿರುವ ಎಲ್ಲ ಲಿಂಗಾಯತ ಮಠಗಳ ಸ್ವಾಮೀಜಿಗಳೊಂದಿಗೆ ಸಭೆ ನಡೆಸಿ ಖೂಬಾ ಗೆಲ್ಲಲು ನೆರವಾಗಬೇಕೆಂದು ಮನವಿ ಮಾಡಿದರು. ರಾಜ್ಯದ ಲಿಂಗಾಯತ ಮಠಗಳು ಮತ್ತು ಮಠಾಧೀಶರೊಂದಿಗೆ ಯಡಿಯಯೂರಪ್ಪ ಉತ್ತಮ ಬಾಂಧವ್ಯ ಇಟ್ಟಕೊಂಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಹಳಷ್ಟು ಮಠಗಳಿಗೆ ಅನುದಾನಗಳನ್ನು ನೀಡಿದ್ದರು. ಹಾಗಾಗೇ, ಮಠಾಧೀಶರು ಸಹ ಅವರ ಮಾತನ್ನು ಕಡೆಗಣಿಸುವುದಿಲ್ಲ. ನಿಮಗೆ ಗೊತ್ತಿರಬಹುದು, ಉತ್ತರ ಕರ್ನಾಟಕದಲ್ಲಿ ಅತಿಹೆಚ್ಚು ಲಿಂಗಾಯತ ಮಠಮಾನ್ಯಗಳಿವೆ ಮತ್ತು ಚುನಾವಣೆಗಳ ಸಂದರ್ಭದಲ್ಲಿ ಅವು ನಿರ್ಣಾಯಕ ಅಂತ ಹೇಳಲಾಗದಿದ್ದರೂ ಮಹತ್ತರ ಪಾತ್ರ ನಿರ್ವಹಿಸುತ್ತವೆ. ಮಠಾಧೀಶರು ಹೇಳುವ ಮಾತನ್ನು ಮಠಗಳಿಗೆ ನಡೆದುಕೊಳ್ಳುವ ಜನ ಚಾಚೂತಪ್ಪದೆ ಪಾಲಿಸುತ್ತಾರೆ. ಇದು ಚತುರ ಮತ್ತು ಹಿರಿಯ ರಾಜಕಾರಣಿ ಯಡಿಯೂರಪ್ಪನವರಿಗೆ ಚೆನ್ನಾಗಿ ಗೊತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚುನಾವಣೆ ಫಲಿತಾಂಶ ಬಂದಾಗ ಸಿದ್ದರಾಮಯ್ಯಗೆ ಯಾರು ಗೋ ಬ್ಯಾಕ್ ಯಾರು ಕಂ ಬ್ಯಾಕ್ ಅನ್ನೋದು ಗೊತ್ತಾಗಲಿದೆ: ಬಿಎಸ್ ಯಡಿಯೂರಪ್ಪ