BSY too has no clue; ವಿರೋಧ ಪಕ್ಷದ ನಾಯಕನ ಹೆಸರನ್ನು ನಾಳೆ ಅಮಿತ್ ಶಾ ಸೂಚಿಸಲಿದ್ದಾರೆ: ಬಿಎಸ್ ಯಡಿಯೂರಪ್ಪ
ಬಿಜೆಪಿ ನಾಯಕರೆಲ್ಲ, ನಾಳೆ ಗೊತ್ತಾಗಲಿದೆ ಅಂತಲೇ ಒಂದು ವಾರದಿಂದ ಹೇಳುತ್ತಿದ್ದಾರೆ.
ಬೆಂಗಳೂರು: ದೆಹಲಿಗೆ ಹೋಗಿದ್ದ ಹಿರಿಯ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ (BS Yediyurappa) ಇಂದು ನಗರಕ್ಕೆ ವಾಪಸ್ಸಾದರು. ದೇವನಳ್ಳಿಯ ಕೆಐಎ ವಿಮಾನ ನಿಲ್ದಾಣದಲ್ಲಿ (KIA International Airport) ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಅನ್ಯಮನಸ್ಕರಾಗಿ ಉತ್ತರಿಸಿದರು. ಕೇಳಿದ ಪ್ರಶ್ನೆ ಎಲ್ಲ ಬಿಜೆಪಿ ನಾಯಕರಿಗೆ ಇರುಸು ಮುರುಸು ಉಂಟು ಮಾಡುವಂಥದ್ದೇ. ವಿಧಾನ ಮಂಡಲದ ಬಜೆಟ್ ಅಧಿವೇಶನ ಶುರುವಾದರೂ ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರನ್ನು ಭೇಟಿಯಾಗಿರುವುದಾಗಿ ಹೇಳಿದ ಯಡಿಯೂರಪ್ಪ ಗೃಹ ಸಚಿವ ಅಮಿತ್ ಶಾ (Amit Shah) ಅವರೊಂದಿಗೂ ಮಾತಾಡಿರುವುದಾಗಿ ಹೇಳಿದರು. ಮಾಜಿ ಮುಖ್ಯಮಂತ್ರಿಗಳು ಹೇಳುವ ಪ್ರಕಾರ ವಿರೋಧ ಪಕ್ಷದ ನಾಯಕನ ಹೆಸರನ್ನು ಅಮಿತ್ ಶಾ ನಾಳೆ ಸೂಚಿಸಲಿದ್ದಾರೆ. ಬಿಜೆಪಿ ನಾಯಕರೆಲ್ಲ, ನಾಳೆ ಗೊತ್ತಾಗಲಿದೆ ಅಂತಲೇ ಒಂದು ವಾರದಿಂದ ಹೇಳುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ