Chikmagalur Vegitable Rate Hike: ಬಿಟ್ಟಿ ಭಾಗ್ಯ ಕೊಟ್ಟು.. ಜೀವನ ನಡೆಸೋಕೆ ಆಗ್ತಿಲ್ಲ -ಎಲ್ಲಾ ರೇಟ್ ಜಾಸ್ತಿ!

Chikmagalur Vegitable Rate Hike: ಬಿಟ್ಟಿ ಭಾಗ್ಯ ಕೊಟ್ಟು.. ಜೀವನ ನಡೆಸೋಕೆ ಆಗ್ತಿಲ್ಲ -ಎಲ್ಲಾ ರೇಟ್ ಜಾಸ್ತಿ!

ಸಾಧು ಶ್ರೀನಾಥ್​
|

Updated on: Jul 03, 2023 | 1:55 PM

ಗಗನಕ್ಕೇರಿದ ತರಕಾರಿ ಬೆಲೆ ಕಾಫಿನಾಡಿನ ಜನತೆಯನ್ನು ಫುಲ್ ಗರಂ ಆಗಿಸಿದೆ. ಯಾರಿಗೆ ಬೇಕು ಈ ಬಿಟ್ಟಿ ಭಾಗ್ಯ, ಮೊದಲು ರೇಟ್ ಕಮ್ಮಿ ಮಾಡಿ ಸಾಕು. ಸಾಮಾನ್ಯ ಜನರ ದುಡ್ಡನ್ನ ತಗೊಂಡು, ಬಿಟ್ಟಿ ಭಾಗ್ಯ ಕೊಡ್ತಾ ಇದ್ದೀರಾ? -ಚಿಕ್ಕಮಗಳೂರು ಜನತೆ ಫುಲ್ ಗರಂ.

ಚಿಕ್ಕಮಗಳೂರು: ಗಗನಕ್ಕೇರಿದ ತರಕಾರಿ ಬೆಲೆ ಕಾಫಿನಾಡಿನ ಜನತೆಯನ್ನು ಫುಲ್ ಗರಂ ಆಗಿಸಿದೆ. ಯಾರಿಗೆ ಬೇಕು ಈ ಬಿಟ್ಟಿ ಭಾಗ್ಯ, ಮೊದಲು ರೇಟ್ ಕಮ್ಮಿ ಮಾಡಿ ಸಾಕು. ಸಾಮಾನ್ಯ ಜನರ ದುಡ್ಡನ್ನ ತಗೊಂಡು, ಬಿಟ್ಟಿ ಭಾಗ್ಯ ಕೊಡ್ತಾ ಇದ್ದೀರಾ? ರಾಜಕಾರಣಿಗಳು ಅವರ ಮನೆಯಿಂದ ತಂದು ಬಿಟ್ಟಿ ಭಾಗ್ಯ ಕೊಡಲ್ಲ. ಫ್ರೀ ಭಾಗ್ಯಗಳಿಂದ ಎಲ್ಲದರ ಬೆಲೆ ಜಾಸ್ತಿಯಾಗಿದೆ. ತರಕಾರಿ ಇಲ್ಲದೆ ಅಡುಗೆ ಮಾಡುವ ಸ್ಥಿತಿ ಬಂದಿದೆ. ಒಂದು ಕೆಜಿ ತರಕಾರಿ ಬದಲು 1/4 ಕೆ.ಜಿ ತೆಗೆದುಕೊಳ್ಳುವ ಸ್ಥಿತಿ ಬಂದಿದೆ. ಟೊಮ್ಯಾಟೊ ಇಲ್ಲದೆ ಅಡುಗೆ ಮಾಡೋದು ಬೆಟರ್ ಅನ್ನಿಸುತ್ತಿದೆ. ಸಾಮಾನ್ಯ ಜನ ಬದುಕೋದೇ ಕಷ್ಟವಾಗಿದೆ. ನಮ್ಮ ದೇಶ ಉಳಿಬೇಕು ಅಂದ್ರೆ ಫ್ರೀ ಭಾಗ್ಯ ತೆಗೆಯಬೇಕು, ರಾಜಕಾರಣಿಗಳ ತಪ್ಪಿಗೆ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಚಿಕ್ಕಮಗಳೂರು ಜನತೆ ತರಕಾರಿ ಬೆಲೆ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಗಗನಕೇರಿದ ತರಕಾರಿ ಬೆಲೆ ಕಾಫಿನಾಡಿನ ಜನತೆ ಶಾಕ್ ಆಗಿದ್ದಾರೆ. ಕಳೆದ ವಾರದ ತರಕಾರಿ ಬೆಲೆಯಲ್ಲಿ ಕೊಂಚ ಬದಲಾವಣೆ ಆಗಿದ್ದು ದರ ಹೀಗಿದೆ:

ಟಮೋಟೊ: 100 ರೂ ಕಳೆದ ವಾರದ ಬೆಲೆ 120
ಮೆಣಸಿನಕಾಯಿ : 80, ಕಳೆದ ವಾರದ ಬೆಲೆ 100
ಈರುಳ್ಳಿ: 20, ಕಳೆದ ವಾರ 20
ಆಲೂಗಡ್ಡೆ : 20ಕಳೆದ ವಾರ 20
ಬೀನ್ಸ್ : 85 ಕಳೆದ ವಾರ 85
ಕ್ಯಾರೆಟ್: 80 ಕಳೆದ ವಾರ 60
ಹೀರೆಕಾರಿ : 60 ಕಳೆದ ವಾರ 60
ಬದನೆಕಾಯಿ: 60 ಕಳೆದ ವಾರ 60
ಬೆಂಡೆಕಾಯಿ : 60 ಕಳೆದ ವಾರ 65
ಹಾಗಲಕಾಯಿ: 80 ಕಳೆದ ವಾರ 60
ನುಗ್ಗೆಕಾಯಿ: 80 ಕಳೆದ ವಾರ 120
ಹೂಕೋಸು : 60 ಕಳೆದ ವಾರ , 60
ಶುಂಠಿ: 160 ಕಳೆದ ವಾರ 200