Coach behaves like goonda: ಕಂಠೀರವ ಕ್ರೀಡಾಂಗಣದಲ್ಲಿ ಕೋಚ್ ಶ್ವೇತಾ ಪ್ರದರ್ಶಿಸಿದ ದುಂಡಾವರ್ತನೆಯನ್ನು ಕ್ರೀಡಾ ಸಚಿವ ಬಿ ನಾಗೇಂದ್ರ ಪ್ರಶ್ನಿಸುವರೇ?

ತಮ್ಮಲ್ಲಿ ತರಬೇತಿಗೆ ಬರುವ ಮಕ್ಕಳ ಮುಂದೆ ತೀವ್ರ ಸ್ವರೂಪದ ಅವಮಾನವಾಗುತ್ತಿದ್ದರೂ ಬಿಂದು ಅವಡುಗಚ್ಚಿ ಸಹಿಸಿಕೊಳ್ಳುತ್ತಾರೆ. ಅವರ ಸಹನೆ ಮತ್ತು ತಾಳ್ಮೆ ಅಭಿನಂದನೀಯ

Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jul 03, 2023 | 1:17 PM

ಬೆಂಗಳೂರು: ಈ ವಿಡಿಯೋ ವೈರಲ್ ಆಗಿದೆ ಮತ್ತು ಇದನ್ನು ಯುವಜನ ಸೇವೆ ಮತ್ತು ಕ್ರೀಡಾ ಖಾತೆ ಸಚಿವ ಬಿ ನಾಗೇಂದ್ರ (B Nagendra) ಆದಷ್ಟು ಬೇಗ ಒಂದು ಕೆಟ್ಟ ಸಂಸ್ಕೃತಿಯನ್ನು ಕನ್ನಡ ನಾಡಿಗೆ ಪ್ರಚುರ ಪಡಿಸುತ್ತಿರುವ ಟ್ರ್ಯಾಕ್ ಸೂಟ್ ಧಾರಿ ಮಹಿಳೆಗೆ ಒಂದು ಸ್ಪಷ್ಟೀಕರಣ ಕೇಳುವ ಅವಶ್ಯಕತೆಯಿದೆ. ಅಂದಹಾಗೆ ಕೂಗಾಡುತ್ತಿರುವ ಮಹಿಳಾ ಕೋಚ್ ಹೆಸರು ಶ್ವೇತಾ (Shwetha) ಮತ್ತು ಅವರ ಎದುರು ಶಾಲಾ ಮಗುವಿನಂತೆ ಬೈಗುಳ, ದೂಷಣೆ ಕೇಳಿಸಿಕೊಳ್ಳುತ್ತಿರುವರು ಅಥ್ಲೀಟ್ ಮತ್ತು ಜ್ಯೂನಿಯರ್ ಕೋಚ್ ಬಿಂದು ರಾಣಿ (Bindu Rani). ಶ್ವೇತಾ ಮತ್ತು ಬಿಂದು ನಡುವೆ ಜಗಳ ಯಾಕೆ ಶುರುವಾಗಿದೆ ಅನ್ನೋದು ಇಲ್ಲಿ ಮುಖ್ಯವಲ್ಲ, ಅದರೆ ಶ್ವೇತಾ ತನ್ನದೇ ಸಮುದಾಯದ ಒಬ್ಬ ಮಹಿಳೆ ವಿರುದ್ಧ ಹೀಗೆ ಸಾರ್ವಜನಿಕವಾಗಿ ಮನಬಂದಂತೆ ಬೈದಾಡುವುದು ಅಕ್ಷಮ್ಯ. ಒಬ್ಬ ರೌಡಿಯಂತೆ ಅವರು ವರ್ತಿಸುತ್ತಿರುವ ಅವರ ಚೀರಾಟ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪ್ರತಿಧ್ವನಿಸುತ್ತದೆ. ಬಿಂದು ರಾಣಿ ಮಾತ್ರ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದಾರೆ ಮತ್ತು ಒಂದೇ ಒಂದು ಶಬ್ದ ಅವರ ಬಾಯಿಂದ ಹೊರಬರುವುದಿಲ್ಲ.

ಅವರ ಪುಂಡಾಟಿಕೆಯನ್ನು ವಿಡಿಯೋ ಮಾಡುತ್ತಿರುವವರ ಮೇಲೂ ಶ್ವೇತಾ ಕೆಟ್ಟ ಭಾಷೆಯಲ್ಲಿ ಕೂಗಾಡುತ್ತಾರೆ. ತಮ್ಮ ಬ್ಯಾಗಲ್ಲಿದ್ದ ಚಪ್ಪಲಿಯನ್ನು ಹೊರತೆಗೆದು ಬಿಂದುಗೆ ತೋರಿಸುವುದು ಶ್ವೇತಾ ದರ್ಪದ ಅತಿರೇಕ ಮತ್ತು ಅಪ್ಪಟ ಗೂಂಡಾಗಿರು. ಬಿಂದುರನ್ನು ತಳ್ಳಾಡುವ ಮೂಲಕ ದೈಹಿಕ ಹಲ್ಲೆಯನ್ನೂ ಶ್ವೇತಾ ನಡೆಸುತ್ತಾರೆ. ತಮ್ಮಲ್ಲಿ ತರಬೇತಿಗೆ ಬರುವ ಮಕ್ಕಳ ಮುಂದೆ ತೀವ್ರ ಸ್ವರೂಪದ ಅವಮಾನವಾಗುತ್ತಿದ್ದರೂ ಬಿಂದು ಅವಡುಗಚ್ಚಿ ಸಹಿಸಿಕೊಳ್ಳುತ್ತಾರೆ. ಅವರ ಸಹನೆ ಮತ್ತು ತಾಳ್ಮೆ ಅಭಿನಂದನೀಯ! ಕ್ರೀಡಾ ಸಚಿವರೇ, ಶ್ವೇತಾ ಹೆಸರಿನ ಈ ಕೋಚ್ ಗೆ ಸಾರ್ವಜನಿಕ ವರ್ತನೆ, ಶಿಷ್ಟಾಚಾರ, ಶಿಸ್ತು- ಮೊದಲಾದವುಗಳ ತರಬೇತಿ ಬೇಕಿದೆ. ದಯವಿಟ್ಟು ಒದಗಿಸಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ