Loading video

ಕುಟುಂಬದ ಕೆಲ ಸದಸ್ಯರೊಂದಿಗೆ ಹಾಸನಾಂಬೆಯ ದರ್ಶನ ಮಾಡಿಕೊಂಡ ಬಿಎಸ್ ಯಡಿಯೂರಪ್ಪ

|

Updated on: Oct 29, 2024 | 6:12 PM

ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಹಾಸನಾಂಬೆಯ ದರ್ಶನಕ್ಕೆ ಹೆಲಿಕಾಪ್ಟರ್​ನಲ್ಲಿ ಆಗಮಿಸಿದ್ದರು. ಇಂದು ಬೆಳಗ್ಗೆ ಕೇಂದ್ರ ಸಚಿವ ವಿ ಸೋಮಣ್ಣ ತಮ್ಮ ಕುಟುಂಬದೊಂದಿಗೆ ಆಗಮಿಸಿದ್ದರು. ದೇವಸ್ಥಾನ ಓಪನ್ ಆಗಿದ್ದು ಇವತ್ತು ನಾಲ್ಕನೆಯ ದಿನ. ಮುಂದಿನ ಆರು ದಿನಗಳ ಕಾಲ ಅದು ತೆರೆದಿರುವುದರಿಂದ ಇನ್ನೂ ಹಲವಾರು ಗಣ್ಯರು ಆಗಮಿಸುವ ನಿರೀಕ್ಷೆ ಇದೆ.

ಹಾಸನ: ಈ ಬಾರಿ ಹತ್ತು ದಿನಗಳಿಗಾಗಿ ತೆರೆಯಲ್ಪಟ್ಟಿರುವ ಹಾಸನಾಂಬೆ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತಾದಿಗಳ ಜೊತೆ ಗಣ್ಯರ ದಂಡು ಸಹ ಆಗಮಿಸುತ್ತಲೇ ಇದೆ. ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಕುಟುಂಬದ ಕೆಲ ಸದಸ್ಯರ ಜೊತೆ ದೇವಿಯ ದರ್ಶನ ಮಾಡಿಕೊಂಡರು. ಹಾಸನಾಂಬೆಯ ಸನ್ನಿಧಿಯಲ್ಲಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಅವರ ಪತ್ನಿ ಭಕ್ತಿ ಮತ್ತು ಶ್ರದ್ಧೆಯಿಂದ ಕೈ ಜೋಡಿ ನಿಂತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಗದಗನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಕಾಂತಿಲಾಲ್ ಬನ್ಸಾಲಿ ಮೇಲೆ ಹಲ್ಲೆ; ಹಣ ದೋಚಿ ಪರಾರಿ