ನಿಮ್ಮ ಎದೆ ಮೇಲೆ ಬುಲ್ಡೋಜರ್ ಓಡಿಸುತ್ತೇವೆ; ಚಪ್ಪಲಿ ಎಸೆದವರಿಗೆ ಬಿಹಾರದ ಡಿಸಿಎಂ ಎಚ್ಚರಿಕೆ
ತಮ್ಮ ಮೇಲೆ ನಡೆದ ದಾಳಿಗೆ ಪ್ರತಿಕ್ರಿಯಿಸಿರುವ ಡಿಸಿಎಂ ವಿಜಯ್ ಕುಮಾರ್ ಸಿನ್ಹಾ, ಆ ಪ್ರತಿಭಟನಾಕಾರರು ಪ್ರಮುಖ ವಿರೋಧ ಪಕ್ಷವಾದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬೆಂಬಲಿತ ಗೂಂಡಾಗಳು ಎಂದು ಅವರು ಆರೋಪಿಸಿದ್ದಾರೆ. "ಬಿಹಾರದಲ್ಲಿ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತಿದೆ. ನಾವು ಈ ರೀತಿ ದಾಳಿ ನಡೆಸಿದವರ ಎದೆಯ ಮೇಲೆ ಬುಲ್ಡೋಜರ್‌ಗಳನ್ನು ಓಡಿಸುತ್ತೇವೆ" ಎಂದು ವಿಜಯ್ ಕುಮಾರ್ ಸಿನ್ಹಾ ಕಿಡಿಕಾರಿದ್ದಾರೆ.
ಪಾಟ್ನಾ, ನವೆಂಬರ್ 6: ಬಿಹಾರದ (Bihar) ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಅವರ ಕ್ಷೇತ್ರವಾದ ಲಖಿಸರೈನಲ್ಲಿ ಇಂದು ಮತಗಟ್ಟೆಗಳಿಗೆ ಭೇಟಿ ನೀಡುವಾಗ ಅವರ ಕಾರಿನ ಮೇಲೆ ಜನರು ಚಪ್ಪಲಿ, ಕಲ್ಲು, ಸಗಣಿಯನ್ನು ಎಸೆದಿದ್ದಾರೆ. ಅಲ್ಲದೆ, “ಮುರ್ದಾಬಾದ್” ಘೋಷಣೆಗಳನ್ನು ಕೂಗಿದ್ದಾರೆ. ಬಿಜೆಪಿಯಿಂದ 3 ಬಾರಿ ಶಾಸಕರಾಗಿರುವ ವಿಜಯ್ ಕುಮಾರ್ ಸಿನ್ಹಾ ಈ ಬಾರಿಯೂ ತಮ್ಮ ತವರು ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿದ್ದಾರೆ.
ತಮ್ಮ ಮೇಲೆ ನಡೆದ ದಾಳಿಗೆ ಪ್ರತಿಕ್ರಿಯಿಸಿರುವ ಡಿಸಿಎಂ ವಿಜಯ್ ಕುಮಾರ್ ಸಿನ್ಹಾ, ಆ ಪ್ರತಿಭಟನಾಕಾರರು ಪ್ರಮುಖ ವಿರೋಧ ಪಕ್ಷವಾದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬೆಂಬಲಿತ ಗೂಂಡಾಗಳು ಎಂದು ಅವರು ಆರೋಪಿಸಿದ್ದಾರೆ. “ಬಿಹಾರದಲ್ಲಿ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತಿದೆ. ನಾವು ಈ ರೀತಿ ದಾಳಿ ನಡೆಸಿದವರ ಎದೆಯ ಮೇಲೆ ಬುಲ್ಡೋಜರ್‌ಗಳನ್ನು ಓಡಿಸುತ್ತೇವೆ” ಎಂದು ವಿಜಯ್ ಕುಮಾರ್ ಸಿನ್ಹಾ ಕಿಡಿಕಾರಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

