AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ

ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ

ರಾಚಪ್ಪಾಜಿ ನಾಯ್ಕ್
| Edited By: |

Updated on: Jan 31, 2026 | 2:41 PM

Share

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಬೌರಿಂಗ್ ಆಸ್ಪತ್ರೆಯ ಅಧೀಕ್ಷಕ ಡಾ. ಎಂಎನ್ ಅರವಿಂದ್ ಆ ಬಗ್ಗೆ ಮಾಹಿತಿ ನೀಡಿದ್ದಾರೆ. 6.35 ಮಿ.ಮೀ. ಬುಲೆಟ್ ಎದೆಯ ಎಡಭಾಗಕ್ಕೆ ಹೊಕ್ಕು ಹೃದಯ, ಶ್ವಾಸಕೋಶ ಮತ್ತು ಡಯಾಫ್ರಮ್‌ಗೆ ಹಾನಿ ಮಾಡಿದೆ. ಗುಂಡಿನ ಗಾಯದಿಂದಲೇ ಸಾವು ಸಂಭವಿಸಿದೆ ಎಂದು ಅವರು ದೃಢಪಡಿಸಿದ್ದಾರೆ.

ಬೆಂಗಳೂರು, ಜನವರಿ 31: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಈ ಬಗ್ಗೆ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಂಎನ್ ಅರವಿಂದ್ ‘ಟಿವಿ9’ ಜತೆ ಮಾತನಾಡಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬುಲೆಟ್ ಎದೆಯ ಎಡಭಾಗಕ್ಕೆ ಹೊಕ್ಕಿದೆ. ಅದು ದೇಹದಿಂದ ಹೊರಹೋಗದೆ ಒಳಗೆ ಉಳಿದಿದೆ. 6.35 ಮಿಲಿಮೀಟರ್ ಗಾತ್ರದ ಬುಲೆಟ್ ಹೃದಯ, ಶ್ವಾಸಕೋಶದ ಕೆಳಭಾಗ ಮತ್ತು ಡಯಾಫ್ರಮ್‌ಗೆ ಹಾನಿ ಮಾಡಿದೆ. ಹಾಗೆಯೇ, ಹೊಟ್ಟೆಯ ಒಂದು ಭಾಗಕ್ಕೂ ತಗುಲಿ ಡಯಾಫ್ರಮ್​ಗೆ ಭಾರಿ ಹಾನಿಯಾಗಿದೆ. ಬುಲೆಟ್ ಹಿಂದಿನ ಪಕ್ಕೆಲುಬುಗಳವರೆಗೆ ತಲುಪಿತ್ತು. ಸಿಜೆ ರಾಯ್ ಸಾವು ಗುಂಡಿನ ಗಾಯದಿಂದಲೇ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಮೃತದೇಹದಿಂದ ಡಿಎನ್‌ಎ ಪರೀಕ್ಷೆಗಾಗಿ ರಕ್ತದ ಮಾದರಿ ಮತ್ತು ಗುಂಡು ಹಾರಿದ ಬಗ್ಗೆ ಬೆರಳಚ್ಚು ಪರೀಕ್ಷೆಗಾಗಿ ಕೈ ಮತ್ತು ಬೆರಳಿನ ಮಾದರಿಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ಡಾ. ಅರವಿಂದ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ