ಉಂಡೂ ಹೋಗಲು ಮತ್ತು ಕೊಂಡೂ ಹೋಗಲು ಚಿಕನ್ ಫ್ರ್ಯಾಂಚೈಸಿಗೆ ಬಂದಿದ್ದ ಕಳ್ಳ ಯಾವುದನ್ನೂ ಮಾಡದೆ ವಾಪಸ್ಸು ಹೋದ!
ಉಂಡೂ ಹೋಗೋಣ ಕೊಂಡೂ ಹೋಗೋಣ ಅಂತ ಬಂದವನಿಗೆ ತೀವ್ರ ಸ್ವರೂಪದ ನಿರಾಶೆಯಾಗಿದ್ದಂತೂ ಸತ್ಯ ಮಾರಾಯ್ರೇ. ಅವನು ಬರಿಗೈಯಲ್ಲಿ ಮತ್ತು ಬರಿ ಹೊಟ್ಟೆಯಲ್ಲಿ ವಾಪಸ್ಸು ಹೋಗಿದ್ದಾನೆ
Bengaluru: ಹೊಟ್ಟೆಪಾಡಿಗಾಗಿ ಕಳ್ಳತನವನ್ನು ಕಸುಬಾಗಿಸಿಕೊಂಡವನೊಬ್ಬ ತಿಳಿದೋ ತಿಳಿಯದೋ ಫೈವ್ ಸ್ಟಾರ್ ಚಿಕನ್ (Five Star Chicken) ಫ್ರ್ಯಾಂಚೈಸಿ ಒಂದರ ಮೇಲ್ಛಾವಣಿ ಮುರಿದು ಒಳಗೆ ಇಳಿದಿದ್ದಾನೆ. ಡಿಜಿಟಲ್ ವ್ಯವಹಾರದ (digital transaction) ಇವತ್ತಿನ ದಿನಗಳಲ್ಲಿ ಯಾವುದೇ ಅಂಗಡಿಯಲ್ಲಿ ಕ್ಯಾಶ್ ಸಿಕ್ಕೀತು ಎಂದು ಭಾವಿಸುವ ಕಳ್ಳ ವೃತ್ತಿಪರ (professional) ಕಳ್ಳನಾಗಿರಲಾರ! ಆದರೆ ಈ ಕಳ್ಳ ಆ ತಪ್ಪು ಮಾಡಿಬಿಟ್ಟಿದ್ದಾನೆ. ಸ್ವಲ್ಪ ಸಮಯದ ನಂತರ ಅವನಿಗದು ಅರಿವಿಗೆ ಬಂದಿದೆ. ಸರಿ ಹೊಟ್ಟೆಪಾಡಿನ ಕೆಲಸ ಆಗದೇ ಹೋದಾಗ ಅವನಿಗೆ ಹೊಟ್ಟೆಯ ಪಾಡು ನೆನಪಾಗಿದೆ. ಅವನು ಹಸಿದಿದ್ದು ನಿಜ. ತಿನ್ನಲು ಏನ್ನನಾದರೂ ಸಿಕ್ಕೀತಾ ಅಂತ ಹುಡುಕಾಡಲಾರಂಭಿಸಿದ್ದಾನೆ. ಆದರೆ, ಈ ಫೈವ್ ಸ್ಟಾರ್ ಚಿಕ್ಕನ್ ಫ್ರ್ಯಾಂಚೈಸಿಗಳು ನೀವು ಆರ್ಡರ್ ಕೊಟ್ಟ ನಂತರವೇ ಅದನ್ನು ರೆಡಿ ಮಾಡುತ್ತಾರೆ. ಈ ಮಂಕುದಿಣ್ಣೆಗೆ ಅದೂ ಗೊತ್ತಾಗಿಲ್ಲ ಮಾರಾಯ್ರೇ!
ಓಕೆ, ಈ ಸಿಸಿಟಿವಿ ಫುಟೇಜ್ ಬೆಂಗಳೂರಿನ ಬ್ಯಾಡರಹಳ್ಳಿಗೆ ಹತ್ತಿರ ತಿಗಳರಪೇಟೆಯಲ್ಲಿರುವ ಫೈವ್ ಸ್ಟಾರ್ ಚಿಕನ್ ಫ್ರ್ಯಾಂಚೈಸಿಯಲ್ಲಿ ಸೆರೆಯಾಗಿದೆ. ಒಂದು ವಿಷಯ ಗಮನಿಸಿ. ಯುವ ಕಳ್ಳನಿಗೆ ಒಳಗೆ ಇಳಿದ ಬಳಿಕ ತನ್ನ ತಲೆಯ ಮೇಲೆಯೇ ಕೆಮೆರಾ ಇರೋದು ಗೊತ್ತಾಗಿದೆ. ತಕ್ಷಣ ಅವನು ಮುಖ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಾನೆ.
ಉಂಡೂ ಹೋಗೋಣ ಕೊಂಡೂ ಹೋಗೋಣ ಅಂತ ಬಂದವನಿಗೆ ತೀವ್ರ ಸ್ವರೂಪದ ನಿರಾಶೆಯಾಗಿದ್ದಂತೂ ಸತ್ಯ ಮಾರಾಯ್ರೇ. ಅವನು ಬರಿಗೈಯಲ್ಲಿ ಮತ್ತು ಬರಿ ಹೊಟ್ಟೆಯಲ್ಲಿ ವಾಪಸ್ಸು ಹೋಗಿದ್ದಾನೆ ಆದರೆ ಪೊಲೀಸರಿಗೆ ತನ್ನ ಚಹರೆಯ ಪರಿಚಯ ನೀಡಿದ್ದಾನೆ. ಅವನನ್ನು ಪತ್ತೆ ಹಚ್ಚೋದು ಪೊಲೀಸರಿಗೆ ಕಷ್ಟವಾಗಲಿಕ್ಕಿಲ್ಲ.