ಗೃಹ ಸಚಿವರೇ, ಬೆಂಗಳೂರಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೀಗಿದೆ!
ಬೇರೆ ಒಂದಿಬ್ಬರು ಸೇರಿ ಕಳ್ಳನನ್ನು ದಬಾಯಿಸಲು ಪ್ರಾರಂಭಿಸಿದಾಗ ಕಳ್ಳ ತಾನು ಬಚ್ಚಿಟ್ಟುಕೊಂಡಿದ್ದ ಖಡ್ಗ ಹೊರಗೆಳೆದು ಅವರನ್ನು ಹೆದರಿಸಿ ಅದೇ ಸ್ಕೂಟರ್ ಮೇಲೆ ಪರಾರಿಯಾಗುತ್ತಾನೆ.
ಬೆಂಗಳೂರಲ್ಲಿ ರಾಜ್ಯ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ (Law and Order) ಚೆನ್ನಾಗಿದೆ, ರೌಡಿಗಳನ್ನು ಮಟ್ಟ ಹಾಕಲಾಗಿದೆ ಯಾವುದೇ ಸಮಸ್ಯೆ ಇಲ್ಲ ಎಂದು ಮುಖ್ಯಮಂತ್ರಿಗಳು, ಗೃಹಸಚಿವರು ಮತ್ತು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಆದರೆ ನೈಜ್ಯ ಸ್ಥಿತಿ ಏನು ಅನ್ನೋದು ಈ ವಿಡಿಯೋದಲ್ಲಿ ಗೊತ್ತಾಗುತ್ತದೆ. ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪ್ಲೈವುಡ್ ಅಂಗಡಿಯೊಂದನ್ನು (plywood shop) ಹಾಡುಹಗಲೇ ನುಗ್ಗಿರುವ ಒಬ್ಬ ಕಳ್ಳ ಏನೋ ದೋಚಿಕೊಂಡು ಹೊರಗಡೆ ದ್ವಿಚಕ್ರ ವಾಹನವೊಂದರ (tw0-wheeler) ಮೇಲೆ ಕಾಯುತ್ತಿರುವ ಅವನ ಸ್ನೇಹಿತ-ಕಳ್ಳನಲ್ಲಿಗೆ ಬಂದು ಗಾಡಿ ಮೇಲೆ ಕೂತು ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಅಂಗಡಿ ಮಾಲೀಕ ಹೊರಗಡೆ ಧಾವಿಸಿ ಕಳ್ಳನನ್ನು ಹಿಡಿದು ಅವನು ದೋಚಿದ್ದ ಸಾಮಾನುಗಳನ್ನು ಕಸಿದುಕೊಳ್ಳುತ್ತಾನೆ. ಬೇರೆ ಒಂದಿಬ್ಬರು ಸೇರಿ ಕಳ್ಳನನ್ನು ದಬಾಯಿಸಲು ಪ್ರಾರಂಭಿಸಿದಾಗ ಕಳ್ಳ ತಾನು ಬಚ್ಚಿಟ್ಟುಕೊಂಡಿದ್ದ ಖಡ್ಗ ಹೊರಗೆಳೆದು ಅವರನ್ನು ಹೆದರಿಸಿ ಅದೇ ಸ್ಕೂಟರ್ ಮೇಲೆ ಪರಾರಿಯಾಗುತ್ತಾನೆ.