ದಿಸ್ ಈಸ್ ಕರ್ನಾಟಕ, ನಾನು ಕನ್ನಡದಲ್ಲೇ ಮಾತಾಡುವೆ ಎಂದರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ನಂತರ ಅವರು ಫ್ರೀಡಂ ಪಾರ್ಕ್ ನಲ್ಲಿ ಎರಡೂವರೆ ಲಕ್ಷ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಮುಷ್ಕರ ನಡೆಸುತ್ತಿರುವ ನಿರುದ್ಯೋಗಿಗಳನ್ನು ಭೇಟಿಯಾದ ವಿಷಯವನ್ನು ಕನ್ನಡದಲ್ಲೇ ಹೇಳಿದರು.

TV9kannada Web Team

| Edited By: Arun Belly

Sep 20, 2022 | 1:45 PM

ಬೆಂಗಳೂರು:  ವಿರೋಧ ಪಕ್ಷದ ನಾಯಕ ಸಿದ್ದರಾಮ್ಯನವರ (Siddaramaiah) ಕನ್ನಡ ಪ್ರೇಮ ಬೇರೆಗ್ರಹದ ಜೀವಿಗಳಿಗೋ ಗೊತ್ತು. ವಿಧಾನ ಸೌಧದ ಆವರಣದಲ್ಲಿ ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತಾಡುವ ಮೊದಲು; ಇಂಗ್ಲಿಷ್ ಮಾಧ್ಯಮದ (English media) ಪ್ರತಿನಿಧಿಗಳು ಇಂಗ್ಲಿಷ್ ನಲ್ಲಿ ಮಾತಾಡಿ ಅಂತ ಆಗ್ರಹಿಸಿದರು. ಅದಕ್ಕೆ ಸಿದ್ದರಾಮಯ್ಯನವರು, ‘ನೋ ಇಂಗ್ಲಿಷ್, ಓನ್ಲೀ ಕನ್ನಡ, ದಿಸ್ ಈಸ್ ಕರ್ನಾಟಕ,’ ಅಂತ ನಗುತ್ತಲೇ ಇಂಗ್ಲಿಷ್ ನಲ್ಲಿ ಹೇಳಿದರು. ನಂತರ ಅವರು ಫ್ರೀಡಂ ಪಾರ್ಕ್ ನಲ್ಲಿ ಎರಡೂವರೆ ಲಕ್ಷ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಮುಷ್ಕರ ನಡೆಸುತ್ತಿರುವ ನಿರುದ್ಯೋಗಿಗಳನ್ನು (unemployed) ಭೇಟಿಯಾದ ವಿಷಯವನ್ನು ಕನ್ನಡದಲ್ಲೇ ಹೇಳಿದರು.

Follow us on

Click on your DTH Provider to Add TV9 Kannada