ಕೆಂಗೇರಿಯ ಅಪಾರ್ಟ್​ಮೆಂಟ್​ ಒಂದರಿಂದ ಬೂಟು, ಬಟ್ಟೆ ಕದ್ಯೊಯ್ದ ಕಳ್ಳರು,  ಆತಂಕದಲ್ಲಿ ನಿವಾಸಿಗಳು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 07, 2021 | 1:04 AM

ಬೆಂಗಳೂರು ನಗರದಲ್ಲಿ ಮನೆಗಳ್ಳತನಗಳು ಜಾಸ್ತಿಯಾಗುತ್ತಿವೆ ಅಂತ ದೂರುಗಳು ಕೇಳಿ ಬರುತ್ತಿವೆ. ಮನೆಗಳ್ಳತನ ಎಂದರೆ, ಬಾಗಿಲು ಮುರಿದು ಮನೆಯಲ್ಲಿರುವ ಚಿನ್ನಾಭರಣಗಳನ್ನು, ಇತರ ವಸ್ತುಗಳನ್ನು ಮಾತ್ರ ಕದ್ದೊಯ್ಯುವುದು ಅಂತ ಮಾತ್ರ ನಾವು ಇದುವರೆಗೆ ಭಾವಿಸಿದ್ದೆವು. ಆದರೆ, ಈ ಕೆಟೆಗೆರಿಗೆ ಈಗ ಹೊಸ ಬಗೆಯ ಕಳ್ಳತನವೂ ಸೇರಿದೆ. ಅದೇನು ಅನ್ನೋದು ನಿಮಗೆ ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಹೌದು, ಈ ಕಳ್ಳರು ಅಪಾರ್ಟ್ಮೆಂಟ್ ಒಂದನ್ನು ನುಗ್ಗಿ ಅಲ್ಲಿನ ಫ್ಲ್ಯಾಟ್ಗಳಲ್ಲಿ ವಾಸಿಸುವ ಜನ ಮನೆ ಮುಂದೆ ಕಳಚಿರುವ ಬೂಟು ಮತ್ತು ಚಪ್ಪಲಿಗಳನ್ನು ಕಳುವು […]

ಬೆಂಗಳೂರು ನಗರದಲ್ಲಿ ಮನೆಗಳ್ಳತನಗಳು ಜಾಸ್ತಿಯಾಗುತ್ತಿವೆ ಅಂತ ದೂರುಗಳು ಕೇಳಿ ಬರುತ್ತಿವೆ. ಮನೆಗಳ್ಳತನ ಎಂದರೆ, ಬಾಗಿಲು ಮುರಿದು ಮನೆಯಲ್ಲಿರುವ ಚಿನ್ನಾಭರಣಗಳನ್ನು, ಇತರ ವಸ್ತುಗಳನ್ನು ಮಾತ್ರ ಕದ್ದೊಯ್ಯುವುದು ಅಂತ ಮಾತ್ರ ನಾವು ಇದುವರೆಗೆ ಭಾವಿಸಿದ್ದೆವು. ಆದರೆ, ಈ ಕೆಟೆಗೆರಿಗೆ ಈಗ ಹೊಸ ಬಗೆಯ ಕಳ್ಳತನವೂ ಸೇರಿದೆ. ಅದೇನು ಅನ್ನೋದು ನಿಮಗೆ ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಹೌದು, ಈ ಕಳ್ಳರು ಅಪಾರ್ಟ್ಮೆಂಟ್ ಒಂದನ್ನು ನುಗ್ಗಿ ಅಲ್ಲಿನ ಫ್ಲ್ಯಾಟ್ಗಳಲ್ಲಿ ವಾಸಿಸುವ ಜನ ಮನೆ ಮುಂದೆ ಕಳಚಿರುವ ಬೂಟು ಮತ್ತು ಚಪ್ಪಲಿಗಳನ್ನು ಕಳುವು ಮಾಡಿಕೊಂಡು ಹೋಗುತ್ತಿದ್ದಾರೆ. ಇದನ್ನು ಮನೆಗಳ್ಳತನ ಅಲ್ಲದೆ ಮತ್ತೇನು ಹೇಳಬೇಕು?

ಬೆಂಗಳೂರಿನ ಕೆಂಗೇರಿ ಸ್ಯಾಟಲೈಟ್ ಟೌನ್ ಅಪಾರ್ಟ್ಮೆಂಟ್ ಒಂದರಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವಿದು. ಇಲ್ಲಿಗೆ ನಾಲ್ವರು ಕಳ್ಳರ ಗುಪೊಂದು ಲಗ್ಗೆಯಿಟ್ಟಿದೆ ಮತ್ತು ತಮಗೆ ಕೈಗೆ ಸಿಗುವ ಶೂ, ಚಪ್ಪಲಿಗಳನ್ನು ಜೊತೆಯಲ್ಲಿ ತಂದಿರುವ ಚೀಲಗಳಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದಾರೆ. ಪೊಲೀಸರಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕಳ್ಳರು ಅಪಾರ್ಟ್ ಮೆಂಟ್ ನಿವಾಸಿಗಳು ಬಾಲ್ಕನಿಗಳಲ್ಲಿ ಒಣಗಲು ಹಾಕಿದ್ದ ಬಟ್ಟೆಗಳನ್ನು ಸಹ ಚೀಲಗಳಲ್ಲಿ ತುರುಕಿಕೊಂಡು ಹೋಗಿದ್ದಾರೆ.

ಸುದ್ದಿ ಗೊತ್ತಾದ ನಂತರ ಅಕ್ಕಪಕ್ಕದ ಮನೆಗಳ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಮಹಜರ್ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ. ಆದರೆ ಅಷ್ಟು ಮಾತ್ರಕ್ಕೆ ಜನರಲ್ಲಿರುವ ಭಯ ಕಡಿಮೆಯಾಗುವುದಿಲ್ಲ. ಪೊಲೀಸರು ಈ ಕಳ್ಳರನ್ನು ಹಿಡಿದು ಜೈಲಿಗಟ್ಟಿದರೂ ಅವರು ಜಾಮೀನು ಪಡೆದು ಹೊರಬಂದು ತಮ್ಮ ಕಾಯಕ ಮುಂದುವರಿಸುತ್ತಾರೆ.

ನಮ್ಮ ದೇಶದಲ್ಲಿ ಕೊಲೆ, ರೇಪ್ ಮುಂತಾದ ಘೋರ ಅಪರಾಧವೆಸಗಿ ಪಾಪಿಗಳೂ ಎರಡೇ ತಿಂಗಳಲ್ಲಿ ಜೈಲಿನಿಂದ ಹೊರಬೀಳುತ್ತಾರೆ. ಅಂಥದರಲ್ಲಿ ಮನೆಗಳ್ಳರು ಹೊರ ಬಂದರೆ ಯಾರು ಗಣನೆಗೆ ತೆಗೆದುಕೊಳ್ಳುತ್ತಾರೆ.

ಇದನ್ನೂ ಓದಿ:  MS Dhoni: ಧೋನಿ ಜೊತೆಗಿನ ಬ್ರೇಕ್ ಅಪ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ಯಾಂಡಲ್​​ವುಡ್ ನಟಿಯ ವಿಡಿಯೋ ವೈರಲ್