ವಾಕಿಂಗ್ ಮಾಡುತ್ತಿದ್ದಾಗಲೇ ಉದ್ಯಮಿಗೆ ಹೃದಯಾಘಾತ:ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Edited By:

Updated on: Jul 13, 2025 | 1:07 PM

ವಾಕಿಂಗ್ (Walking) ಹೋಗುತ್ತಿರುವಾಗಲೇ ಕುಸಿದು ಬಿದ್ದು ಉದ್ಯಮಿ (Businessman) ಸಾವನ್ನಪ್ಪಿದ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ. ಅನಿಲ್ ಕುಮಾರ್ (40) ಮೃತ ಉದ್ಯಮಿ. ದಾವಣಗೆರೆ ನಗರದ ಶಕ್ತಿ ನಗರದ ನಿವಾಸಿಯಾಗಿರುವ ಅನಿಲ್ ಕುಮಾರ್ ಎಸ್‌ಎಸ್‌ರಸ್ತೆ ಪಕ್ಕದ ಡಿಆರ್ ಸರ್ಕಲ್‌ದಾರಿಯಲ್ಲಿ ವಾಕ್ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ದಾವಣಗೆರೆ, (ಜುಲೈ 13): ವಾಕಿಂಗ್ (Walking) ಹೋಗುತ್ತಿರುವಾಗಲೇ ಕುಸಿದು ಬಿದ್ದು ಉದ್ಯಮಿ (Businessman) ಸಾವನ್ನಪ್ಪಿದ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ. ಅನಿಲ್ ಕುಮಾರ್ (40) ಮೃತ ಉದ್ಯಮಿ. ದಾವಣಗೆರೆ ನಗರದ ಶಕ್ತಿ ನಗರದ ನಿವಾಸಿಯಾಗಿರುವ ಅನಿಲ್ ಕುಮಾರ್ ಎಸ್‌ಎಸ್‌ರಸ್ತೆ ಪಕ್ಕದ ಡಿಆರ್ ಸರ್ಕಲ್‌ದಾರಿಯಲ್ಲಿ ವಾಕ್ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅನಿಲ್ ಕುಮಾರ್ ಕುಸಿದು ಬೀಳುವ ದೃಶ್ಯ ಪಕ್ಕದ ಶಾಪ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Published on: Jul 13, 2025 01:07 PM
Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More